ಚಾಮರಾಜನಗರ –
ಕಲುಷಿತ ನೀರು ಅಥವಾ ಆಹಾರ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ ಎಚ್.ಡಿ.ಕೋಟೆ ತಾಲೂಕಿನ ಮಹದೇಶ್ವರ ಕಾಲೋನಿ ಯಲ್ಲಿ ಈ ಒಂದು ಘಟನೆ ನಡೆದಿದೆ
ಘಟನೆಯಲ್ಲಿ ಅಸ್ವಸ್ಥಗೊಂಡಿದ್ದಾರೆ 14 ಶಾಲಾ ಮಕ್ಕಳು. ಸಧ್ಯ ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಈ ಎಲ್ಲಾ ಮಕ್ಕಳು
ಗ್ರಾಮದ ಶಾಲೆಯಲ್ಲಿ ಹಾಲು ಸೇವಿಸದ ಪರಿಣಾಮ ವಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ಗ್ರಾಮಸ್ಥರ ಆರೋಪವನ್ನು ಮಾಡಿದ್ದಾರೆ.ಇನ್ನೂ ಸುದ್ದಿಯನ್ನು ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥ ರಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ
ಇನ್ನೂ ಶಿಕ್ಷಕರೊಡನೆ ಮಾತಿನ ವಾಗ್ದಾಳಿಗಿಳಿದ್ದಾರೆ ಗ್ರಾಮಸ್ಥರು.ಇತ್ತ ಗ್ರಾಮದ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.ಕಳೆದ ರಾತ್ರಿಯಿಂದಲೂ ವಾಂತಿ ಜ್ವರದಿಂದ ಬಳಲುತ್ತಿದ್ದಾರೆ ಮಕ್ಕಳು.
ಇನ್ನೂ ಆಸ್ಪತ್ರೆ ತುರ್ತು ವಾಹನದಲ್ಲಿ ಅಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಮಕ್ಕಳನ್ನು ಭುಜದ ಮೇಲೆ ಹೊತ್ತು ಒಡೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಪೋಷಕರು. ಮಕ್ಕಳ ಆರೋಗ್ಯದ ಬಗ್ಗೆ ಭಯ ಬೀತರಾಗದಂತೆ ಪೋಷಕರಿಗೆ ಧೈರ್ಯ ತುಂಬಿದ್ದಾರೆ ವೈದ್ಯರು