ಚಿಕ್ಕಬಳ್ಳಾಪುರ –
ರಾಜ್ಯದಲ್ಲಿ ಪಿಎಸ್‌ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣ ಬಯಲಾಗಿದ್ದು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.ಇನ್ನೂ ರಾಜಕಾರಣಿಗಳ ಸಮೇತ ಹಲವರ ಬಂಧನ ಆಗಿದ್ದು ತನಿಖೆ ಮುಂದುವರೆ ದಿದೆ.ಇದರ ನಡುವೆ ಚಿಕ್ಕಬಳ್ಳಾಪುರದಲ್ಲಿಯೂ ಸಹ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ವಸೂಲಿ ಮಾಡಿ ವಂಚನೆ ಮಾಡಿರುವ ಖತರ್ನಾಕ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನವೀನ್ ಧಳಬಂಜನ್ ಎಂಬುವನು ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಶಿಕ್ಷಕರೊಬ್ಬರ ಬಳಿ ಲಕ್ಷ ಲಕ್ಷ ವಸೂಲಿ ಮಾಡಿ ವಂಚನೆ ಮಾಡಿ ಈಗ ಪೊಲೀಸರ ಅಥಿತಿಯಾಗಿದ್ದಾನೆ.ಬಾಗೇಪಲ್ಲಿ ಪೊಲೀಸರು ನವೀನ್ ಧಳಬಂಜನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಾಗೇಪಲ್ಲಿ ಪಟ್ಟಣದ ಶಿಕ್ಷಕ ಸತ್ಯನಾರಾಯಣರವರ ಮಗ ಕಿರಣ್ ಎಂಬಾತ 2019ರಲ್ಲಿ 300 ಮಂದಿ ಪಿಎಸ್‌ಐ ನೇಮಕಾತಿ ವೇಳೆ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾ ಗಿದ್ದ ಆದ್ರೆ ಈ ವೇಳೆ ಸತ್ಯನಾರಾಯಣ ಸ್ನೇಹಿತ ಜಯರಾ ಮರೆಡ್ಡಿ ಮೂಲಕ ಪರಿಚಯವಾದ ಈ ನವೀನ್ ಧಳಬಂ ಜನ್ ನಿಮಗ್ಯಾಕೆ ನಿಮ್ಮ ಮಗನಿಗೆ ನಾನು ಪಿಎಸ್‌ಐ ಹುದ್ದೆ ಕೊಡಿಸ್ತೀನಿ ಅಂತ ಹೇಳಿ ಹಂತ ಹಂತವಾಗಿ ಸತ್ಯನಾರಾಯ ಣರೆಡ್ಡಿ ಬಳಿ 21 ಲಕ್ಷದ 20 ಸಾವಿರ ರೂಪಾಯಿ ಪಡೆದಿ ದ್ದಾನೆ.



21 ಲಕ್ಷ ಹಣ ಪಡೆದ ಆರೋಪಿ ನವೀನ್ ಧಳವಂಜನ್ ಕೆಲಸ ಕೊಡಿಸದ ಹಿನ್ನೆಲೆ ಸತ್ಯನಾರಾಯಣರೆಡ್ಡಿ ದುಡ್ಡು ವಾಪಾಸ್ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.ಈಗ ಕೊಡ್ತೀನಿ ಆಗ ಕೊಡ್ತೀನಿ ಅಂತ ಕಥೆ ಹೇಳಿ ಕಾಗೆ ಹಾರಿಸ್ತಿದ್ದ ನವೀನ್ ವಿರುದ್ಧ ಸತ್ಯನಾರಾಯಣರೆಡ್ಡಿ ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನನ್ವಯ ಆರೋಪಿ ನವೀನ್ ಧಳಬಂಜನ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ

ಸದ್ಯ ಪಿಎಸ್‌ಐ ಹುದ್ದೆ ಕೊಡಿಸುವದಾಗಿ ಆರೋಪಿ ನವೀನ್ ಧಳಬಂಜನ್ ಪಡೆದ ಹಣದಲ್ಲಿ ಶೋಕಿ ಮಾಡಿ ಖರ್ಚು ಮಾಡಿಬಿಟ್ಟಿದ್ದಾನಂತೆ.ಈ ನವೀನ್ ಧಳಬಂಜನ್ ಸತ್ಯನಾರಾಯಣರೆಡ್ಡಿಗೆ ಮಾತ್ರ ಮೋಸ ಮಾಡಿದ್ದನಾ ಇಲ್ಲ ಬೇರೆ ಯಾರಿಗಾದರೂ ಇದೇ ರೀತಿ ಮೋಸ ಮಾಡಿರಬ ಹುದಾ ಅಂತಲೂ ತನಿಖೆ ಮುಂದುವರೆಸಿದ್ದಾರೆ.