SSLC ಫಲಿತಾಂಶ ನಾಳೆ ಪ್ರಕಟ ಪರೀಕ್ಷಾ ಇತಿಹಾಸದಲ್ಲಿಯೇ ಮೊದಲ ಬಾರಿ ವಿಶೇಷ ಪರೀಕ್ಷೆ ನಡೆಸಲಾಗಿತ್ತು……

Suddi Sante Desk

ಬೆಂಗಳೂರು –

ಹತ್ತು ಹಲವಾರು ಸಮಸ್ಯೆ ಸಂಕಷ್ಟದ ನಡುವೆ ಈ ಬಾರಿ ಭಾರೀ ಚರ್ಚೆಗೀಡಾಗಿದ್ದ 2020-21ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶಗಳು ನಾಳೆ  ಪ್ರಕಟವಾಗಲಿದೆ.ನಾಳೆಯೇ ಫಲಿತಾಂಶ ಪ್ರಕಟಿಸ ಲು ಪ್ರೌಢಶಿಕ್ಷಣ ಪರೀಕ್ಷಾ ಶಿಕ್ಷಣ ಮಂಡಳಿ ಸಿದ್ಧತೆ ನಡೆಸಿದೆ.

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶಕ್ಕೆ ಮಂಡಳಿಯು ಕಾಯುತ್ತಿದ್ದು ಫಲಿತಾಂಶ ಪ್ರಕಟಿಸಲು ಆದೇಶ ನೀಡಿದ್ರೆ ನಾಳೆಯೇ ಫಲಿತಾಂಶ ಪ್ರಕಟವಾಗಲಿದೆ.ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಯು ಈಗಾಗಲೇ ಮೌಲ್ಯಮಾಪನ ಕಾರ್ಯ ಪೂರ್ಣ ಗೊಳಿಸಿದ್ದು ಫಲಿತಾಂಶ ಪ್ರಕಟಿಸಲು ಆದೇಶಕ್ಕಾಗಿ ಕಾಯುತ್ತಿದೆ.ಕೊರೋನಾ ಭೀತಿಯ ನಡುವೆ ಬಹಳ ಷ್ಟು ಚರ್ಚೆಗಳ ಬಳಿಕ ಕಳೆದ ಜು.19 ಮತ್ತು 22 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲಾ ಗಿತ್ತು ಈ ಬಾರಿ ಕೇವಲ 2 ದಿನದಲ್ಲಿ ಪರೀಕ್ಷೆ ನಡೆದಿದ್ದ ಎಲ್ಲಾ ವಿಷಯಗಳನ್ನು ಒಳಗೊಂಡಿತ್ತು.ಒಂದೊಂದು ದಿನ ಮೂರು ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪ್ರತಿ ವಿಷಯಕ್ಕೂ ಬಹು ಆಯ್ಕೆ ಪ್ರಶ್ನೆಗಳ ಮಾದರಿಯ 40 ಅಂಕಗಳ ಪ್ರಶ್ನೆಗಳಂತೆ ಒಟ್ಟು 120 ಪ್ರಶ್ನೆಗಳನ್ನು ಕೇಳಲಾಗಿತ್ತು. ಉತ್ತರ ಗುರುತಿಸಲು ಪ್ರತಿ ವಿಷಯಕ್ಕೂ ಪ್ರತ್ಯೇಕ ಬಣ್ಣದ ಒಎಂಆರ್‌ ಪ್ರಶ್ನೆಗಳನ್ನು ನೀಡಲಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.