ದಾವಣಗೆರೆ –
ಹಳೇ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯಿಂದ ಗ್ರಾಪಂ ಸದಸ್ಯನಿಗೆ ಚಾಕು ಇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆಯ ನ್ಯಾಮತಿ ತಾಲೂಕಿನ ಚಿಲೂರಿನಲ್ಲಿ ಈ ಒಂದು ಘಟನೆ ನಡೆದಿದೆ. ಕೆಂಗೋಟೆ ಗ್ರಾಪಂ ಸದಸ್ಯ ನಾಗರಾಜ್ ನಾಯ್ಕ್ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ.

ನಾಗರಾಜ್ ನಾಯ್ಕ್ ಗೆ ತೀವ್ರ ಗಾಯವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ರಾಕೇಶ್, ದರ್ಶನ್ ಎಂಬುವರಿಂದ ಚಾಕು ಇರಿತವಾಗಿದೆಯಂತೆ.ಇನ್ನೂ ಈ ಒಂದು ಪ್ರಕರಣ ಕುರಿತು ನ್ಯಾಮತಿ ಪೊಲೀಸರಿಂದ ಇಬ್ಬರ ಬಂಧನವಾಗಿದ್ದು ತನಿಖೆ ಮುಂದುವರಿದಿದೆ.

ಕ್ಷುಲಕ ಕಾರಣಕ್ಕೆ ರಾಕೇಶ್ ಮತ್ತು ನಾಗರಾಜ್ ನಾಯ್ಕ್ ಮಧ್ಯೆ ಹಿಂದೆ ಸಣ್ಣ ಗಲಾಟೆ ನಡೆದಿತ್ತು. ಚೀಲೂರಿನ ಬಸ್ ನಿಲ್ದಾಣ ಬಳಿ ನಾಗರಾಜ್ ನಾಯ್ಕ್ ಮೇಲೆ ದಾಳಿ ಮಾಡಲಾಗಿದೆ.ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನೂ ಈ ಒಂದು ಘಟನೆ ಬಳಿಕ ಗ್ರಾಮದಲ್ಲಿ ಡಿಆರ್ ವ್ಯಾನ್ ಮೊಕ್ಕಾಂ ಹೂಡಿದೆ.