ಮದ್ವೆಯಾಗಿ ಎರಡೇ ದಿನಕ್ಕೆ ಶೂಟಿಂಗ್‌ಗೆ ಹೊರಟ ತಾರಾ ಜೋಡಿ – ಧಾರವಾಡದ ಈ ಜೋಡಿ ಮಾದರಿಯಾಯಿತು ಚಿತ್ರರಂಗದಲ್ಲಿ…..

Suddi Sante Desk

ಧಾರವಾಡ –

ಸಾಮಾನ್ಯವಾಗಿ ಸೆಲೆಬ್ರೆಟಿಗಳ ಮದುವೆ ಎಂದರೆ ಭರ್ಜರಿ ಯಾಗಿ ಮಾಡಲಾಗುತ್ತದೆ.ಮದುವೆಯ ನಂತರವೂ ಕೂಡಾ ಹನಿಮೂನ್ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗ ಳಲ್ಲಿ ಬ್ಯುಸಿ ಇರುತ್ತಾರೆ.ಅವರ ಕೆಲಸದಿಂದ ಕೆಲ ದಿನಗಳ ಬಿಡುವು ಪಡೆಯುತ್ತಾರೆ.ಆದರೆ ಇಲ್ಲೊಂದು ತಾರಾ ಜೋಡಿ ಮದುವೆಯಾದ ಕೇವಲ 2 ದಿನದಲ್ಲಿ ತಮ್ಮ ಕೆಲಸ ಆರಂಭಿ ಸಿದ್ದಾರೆ.

ಹೌದು ನಿರ್ದೇಶಕ ಸಾಗರ್ ಪುರಾಣಿಕ್ ಮತ್ತು ನಟಿ ದೀಪಾ ಜಗದೀಶ್ ಮೇ 18 ರಂದು ಧಾರವಾಡದಲ್ಲಿ ಅದ್ದೂರಿ ಯಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.ಪೋಷಕರು, ಸ್ನೇಹಿತರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ಈ ಜೋಡಿ ಮದುವೆಯಾದ ಕೇವಲ 2 ದಿನದಲ್ಲಿ ಕೆಲಸಕ್ಕೆ ಮರಳಿದ್ದಾರೆ.ನಾವು ರೋಮಾಂಚಕಾರಿ ಪ್ರಯಾಣ ವನ್ನು ಪ್ರಾರಂಭಿಸುತ್ತಿದ್ದೇವೆ.ನಾವು ರೆಸಾರ್ಟ್‌ನಲ್ಲಿ ತೆರೆದ ಪ್ರದೇಶದಲ್ಲಿ ಮದುವೆಯಾದ ಕಾರಣ ಮದುವೆಯ ದಿನ ಮಳೆಯ ಭಯ ಇತ್ತು.ಆದರೆ ತುಸು ತುಂತುರು ಮಳೆ ನಮ್ಮ ಮದುವೆಯ ಸಂಭ್ರಮವನ್ನು ಹೆಚ್ಚು ಮಾಡಿತು ಎಂದು ಸಾಗರ್ ಹೇಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಹ ಕಳೆದ ಎರಡು ದಿನಗಳ ಕಾಲ ಸಾಕಷ್ಟು ಆಚರಣೆಗಳು ನಡೆದಿವೆ.ಆದ್ದರಿಂದ ನಮಗೆ ವಿಶ್ರಾಂತಿ ಇರಲಿಲ್ಲ. ನನ್ನ ಕುಟುಂಬದ ಸದಸ್ಯರಿಗೆ ದೀಪಾ ಪರಿಚಯವಿದ್ದುದರಿಂದ ಆಕೆ ಅವರಿಗೆ ಸಂಪೂರ್ಣವಾಗಿ ಹೊಸಬಳಲ್ಲ. ಉತ್ತರ ಕರ್ನಾಟಕದ ಹಲವು ರಾಜಕಾರಣಿ ಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು.ವಾರದ ಮಧ್ಯ ಭಾಗವಾಗಿದ್ದರಿಂದ ಉದ್ಯಮದವರಿಗೆ ಮದುವೆಗೆ ಹಾಜರಾ ಗಲು ಸಾಧ್ಯವಾಗಲಿಲ್ಲ ಎಂದು ಮದುವೆಯ ಬಗ್ಗೆ ಹೇಳಿ ದ್ದಾರೆ.ಇನ್ನು ಮದುವೆಯಾದ ಕೇವಲ 2 ದಿನದಲ್ಲಿ ಕೆಲಸ ಆರಂಭಿಸಿರುವ ಬಗ್ಗೆ ಮಾತನಾಡಿದ ಅವರು ನಾವಿಬ್ಬರೂ ಜೀವನದಲ್ಲಿ ಕೆಲಸವನ್ನು ಸಮಾನವಾಗಿ ಪರಿಗಣಿಸುತ್ತೇವೆ ಅದು ಶೀಘ್ರದಲ್ಲೇ ಕೆಲಸವನ್ನು ಪುನರಾರಂಭಿಸಲು ಕಾರಣ ವಾಗಿದೆ.ದೀಪಾ ಹೈದರಾಬಾದ್‌ನಲ್ಲಿ ಶೂಟಿಂಗ್ ಆರಂಭಿ ಸಿದ್ದು, ನಾನು ಕೂಡ ನನ್ನ ಕೆಲಸ ಪ್ರಾರಂಭಿಸಿದ್ದೇನೆ.ಈ ಹಿಂದಯೇ ನಟಿ ದೀಪಾ ಜಗದೀಶ್ ಪ್ರೀತಿಸುತ್ತಿರುವ ವಿಚಾರವನ್ನು ಸಾಗರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

‘ಮಹಾಸತಿ’ ಧಾರಾವಾಹಿಯನ್ನು ಸುನೀಲ್ ಪುರಾಣಿಕ್ ನಿರ್ಮಾಣ ಮಾಡಿದ್ದರು.ಈ ಸೆಟ್‌ನಲ್ಲಿ ಸಾಗರ್ ಮತ್ತು ದೀಪಾ ಮೊದಲು ಭೇಟಿಯಾಗಿದ್ದರಂತೆ.ಕನ್ನಡ ಕಿರುತೆರೆ ಯಲ್ಲಿ ಬಹಳ ಹೆಸರು ಮಾಡಿರುವ ನಟ ಸುನಿಲ್ ಪುರಾ ಣಿಕ್ ಅವರ ಮಗ ಸಾಗರ್.ಅಪ್ಪನಂತೆ ಸಾಗರ್ ಅವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ.ಸಾಗರ್ ಪುರಾಣಿಕ್ ಅವರು ನಿರ್ದೇಶಕ.ಅವರ ಮೊದಲ ನಿರ್ದೇಶನದ ಸಿನಿಮಾ ಡೊಳ್ಳು ಗೆ ದಾದಾಸಾ ಹೇಬ್ ಪಾಲ್ಕೆ ಪ್ರಶಸ್ತಿ ಲಭಿಸಿದೆ.ಸದ್ಯಕ್ಕೆ ದೀಪಾ ಜಗದೀಶ್ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ‘ಕಾವ್ಯಾಂಜಲಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ಸೆಟ್ ನಲ್ಲಿ ತೊಂದರೆ ಆಗಿತ್ತು ಎಂದು ತೊರೆದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಕೂಡ ಕಾವ್ಯಾಂಜಲಿ ಧಾರಾವಾಹಿ ಅಂತ್ಯವಾಗಲಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ನಿರ್ದೇಶಕ ಕುಮಾರ್ ಎಲ್ ಅವರು ಕ್ರಿಟಿಕಲ್ ಕೀರ್ತನೆ ಗಳು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಈ ಸಿನಿಮಾ ದಲ್ಲಿ ದೀಪಾ ಜಗದೀಶ್ ಅಭಿನಯಿಸಿದ್ದಾರೆ.

ವರದಿ ಶಕ್ತಿ ಹಿರೇಮಠ ಸುದ್ದಿ ಸಂತೆ ಟೀಮ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.