ಸದ್ದಿಲ್ಲದೇ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು – 7ನೇ ವೇತನ ಆಯೋಗ,OPS ಜಾರಿಗೆ ಕುರಿತಂತೆ ಸಿಡಿದೆದ್ದ ನೌಕರರು…..ನೌಕರರ ಹೋರಾಟದ ಕುರಿತಂತೆ ರಾಜ್ಯ ಸರ್ಕಾರಕ್ಕೆ ಗುಪ್ತಚರ ಇಲಾಖೆ ನೀಡಿದೆ ಮಾಹಿತಿ…..

Suddi Sante Desk
ಸದ್ದಿಲ್ಲದೇ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು – 7ನೇ ವೇತನ ಆಯೋಗ,OPS ಜಾರಿಗೆ ಕುರಿತಂತೆ ಸಿಡಿದೆದ್ದ ನೌಕರರು…..ನೌಕರರ ಹೋರಾಟದ ಕುರಿತಂತೆ ರಾಜ್ಯ ಸರ್ಕಾರಕ್ಕೆ ಗುಪ್ತಚರ ಇಲಾಖೆ ನೀಡಿದೆ ಮಾಹಿತಿ…..

ಬೆಂಗಳೂರು

ಸದ್ದಿಲ್ಲದೇ ಹೋರಾಟಕ್ಕೆ ಸಿದ್ದರಾಗುತ್ತಿದ್ದಾರೆ ರಾಜ್ಯ ಸರ್ಕಾರಿ ನೌಕರರು – 7ನೇ ವೇತನ ಆಯೋಗ,OPS ಜಾರಿಗೆ ಕುರಿತಂತೆ ಸಿಡಿದೆದ್ದ ನೌಕರರು…..ನೌಕರರ ಹೋರಾಟದ ಕುರಿತಂತೆ ರಾಜ್ಯ ಸರ್ಕಾರಕ್ಕೆ ಗುಪ್ತಚರ ಇಲಾಖೆ ನೀಡಿದೆ ಮಾಹಿತಿ

7ನೇ ವೇತನ ಆಯೋಗ ಮತ್ತು ಹಳೆ ಪಿಂಚಣಿ ಯೋಜನೆ ವಿಚಾರ ಕುರಿತಂತೆ ರಾಜ್ಯ ಸರ್ಕಾರ ನೌಕರರು ಸಿಡೆದಿದ್ದಿದ್ದಾರೆ.ಹೌದು ಪ್ರಮುಖವಾಗಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ.ಆಯೋಗದ ಅವಧಿ ಮಾರ್ಚ್ 15 ಕ್ಕೆ ಮುಗಿಯುತ್ತಾ ಬಂದಿದ್ದು ಈಗಾಗಲೇ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಹೀಗಿರುವಾಗ ಸಧ್ಯ ಆಯೋಗವು ಕೂಡಾ ವರದಿಯನ್ನು ಸಂಪೂರ್ಣವಾಗಿ ಸಿದ್ದೆತೆಯನ್ನು ಮಾಡಿದ್ದು ವರದಿಯನ್ನು ಸ್ವೀಕಾರ ಮಾಡಿದರೆ ಗ್ಯಾರಂಟಿ ಯೋಜನೆಯ ನಡುವೆ ಆರ್ಥಿಕ ಪರಸ್ಥಿತಿ ಸಧ್ಯ ಸರಿಯಾಗಿಲ್ಲ ಹೀಗಾಗಿ ಮತ್ತೊಂದು ದೊಡ್ಡ ಹೊರೆ ರಾಜ್ಯ ಸರ್ಕಾರದ ಮೇಲೆ ಬೀಳಲಿದ್ದು ಈ ಒಂದು ಹಿನ್ನಲೆಯಲ್ಲಿ ವರದಿಯನ್ನು ಸ್ವೀಕಾರ ಮಾಡಿ ಜಾರಿಗೆ ತರಲು ರಾಜ್ಯ ಸರ್ಕಾರ ಸ್ವಲ್ಪ ಮಟ್ಟಿಗೆ ಹಿಂದೆಟು ಹಾಕ ಲಾಗುತ್ತಿದೆ.ಇನ್ನೂ ಒಂದು ವಿಚಾರವಾದರೆ ಪ್ರಮುಖವಾಗಿ 7ನೇ ವೇತನ ಆಯೋಗ ಮತ್ತು ಹಳೆ ಪಿಂಚಣಿ ಯೋಜನೆ ಕುರಿತಂತೆ ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಯಾವುದೇ ಅನುದಾನ ವನ್ನು ಮೀಸಲಟ್ಟಿಲ್ಲ

ಇದರ ಜೊತೆಗೆ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲೂ ಕೂಡಾ ಮುಖ್ಯಮಂತ್ರಿ ಯವರು ಏನನ್ನೂ ಘೋಷಣೆ ಮಾಡಿಲ್ಲ ಹೀಗಾಗಿ ಸಧ್ಯ ಇನ್ನೇನು ಕೆಲವೆ ದಿನಗಳಲ್ಲಿ ನೀತಿ ಸಂಹಿತಿ ಬರಲಿದ್ದು ಇದನ್ನು ಅರಿತುಕೊಂಡ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಕಾದು ನೋಡೊಣಾ ಬೇಡಿಕೆಗಳನ್ನು ಈಢೇರಿಸದಿದ್ದರೆ ಖಂಡಿತವಾ  ಗಿಯೂ ಹೋರಾಟವನ್ನು ಮಾಡೊಣಾ ಎಂದು ಹೇಳಿದ್ದರು.

ಇದೇಲ್ಲದರ ನಡುವೆ ಸಧ್ಯ ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1 ರಿಂದ ಹೋರಾಟಕ್ಕೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಈ ಒಂದು ವಿಚಾರವನ್ನು ರಾಜ್ಯ ಸರ್ಕಾರಕ್ಕೆ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದ್ದು ಈ ಒಂದು ಮಾಹಿತಿಯ ಪ್ರತಿ ಸಾಮಾಜಿಕ ಜಾಲ ತಾಣಗ ಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಇತ್ತ ಮುಖ್ಯ ಮಂತ್ರಿಯವರು ಈ ಒಂದು ವಿಚಾರದಲ್ಲಿ ಯಾವ ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.