ನವಲಗುಂದ –
ಶಾಸಕ NH ಕೋನರಡ್ಡಿ ಯವರಿಗೆ ಭರ್ಜರಿ ಗಿಪ್ಟ್ ನೀಡಿದ ರಾಜ್ಯ ಸರ್ಕಾರ – ಮಾದರಿ ಕ್ಷೇತ್ರದ ಕನಸು ಕಂಡಿರುವ ಶಾಸಕರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರದಿಂದ ಭರ್ಜರಿ ಗಿಪ್ಟ್….. ಅಭಿನಂದನೆ ಸಲ್ಲಿಸಿದ NHK
ಈಗಾಗಲೇ ಹತ್ತು ಹಲವಾರು ಅಭಿವೃದ್ದಿ ಕೆಲಸ ಕಾರ್ಯಗಳೊಂದಿಗೆ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿಯನ್ನು ಮಾಡುತ್ತಿರುವ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರಡ್ಡಿಯವರು ನವಲಗುಂದ ಕ್ಷೇತ್ರವನ್ನು ಒಂದು ಮಾದರಿ ಕ್ಷೇತವನ್ನಾಗಿ ಮಾಡುವ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.
ಅಲ್ಲದೇ ಈ ಒಂದು ನಿಟ್ಟಿನಲ್ಲಿ ಕ್ಷೇತ್ರದಲ್ಲೂ ಕೂಡಾ ಕೆಲಸ ಕಾರ್ಯಗಳು ನಡೆಯುತ್ತಿದ್ದು ಈ ಒಂದು ಕನಸಿನೊಂದಿಗೆ ದಿನೇ ದಿನೇ ದಿಟ್ಟ ಹೆಜ್ಜೆಗಳನ್ನೀಡುತ್ತಾ ಸಾಗುತ್ತಿದ್ದಾರೆ. ಕ್ಷೇತ್ರದಲ್ಲಿನ ರೈತರಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಚಕ್ಕಡಿ ರಸ್ತೆಗಳನ್ನು ಹೈಟೇಕ್ ಆಗಿ ಮಾಡಿ ಸಧ್ಯ ಯಾರು ಕೂಡಾ ಯಾರೊಬ್ಬರೂ ಕೂಡಾ ವಸತಿ ರಹಿತರಾಗಿರಬಾರದೆಂದು ಯೋಜನೆ ಹಾಕಿ ಕೊಂಡಿದ್ದಾರೆ.
ಈ ಒಂದು ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿರುವ ಇವರ ಮನವಿಗೆ ಸ್ಪಂದಿಸಿ ನವಲಗುಂದ ವಿಧಾನಸಭಾ ಕ್ಷೇತೃಕ್ಕೆ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ ನಿವಾಸ್ ಯೋಜನೆಯಡಿ (ಗ್ರಾಮೀಣ) 1000 ಮನೆಗಳನ್ನು ಮಂಜೂರ ಮಾಡಲಾಗಿದೆ. ಕ್ಷೇತ್ರಕ್ಕೆ ಮನೆಗಳನ್ನು ನೀಡಿದ ಈ ಒಂದು ಹಿನ್ನಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಚಿವರು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮ್ಮದ್ ಇವರಿಗೆ ಶಾಸಕ ಎನ್ ಹೆಚ್ ಕೋನರಡ್ಡಿಯವರು ಧನ್ಯವಾದಗಳನ್ನು ಸಲ್ಲಿಸಿ ಹಾರ್ದಿಕ ಅಭಿನಂದನೆಗಳನ್ನು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವಲಗುಂದ…..