ಬೆಂಗಳೂರು –
ಬಿಸಿಲಿನ ತಾಪಮಾನದಿಂದ ಬೆಳಗಾವಿ ವಿಜಯಪುರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿನ ಕಚೇರಿಯ ಸಮಯವನ್ನು ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದ ಅರ್ಜಿಯನ್ನು ರಾಜ್ಯ ಸರ್ಕಾರ ತಳ್ಳಿಹಾಕಿದೆ. ಹೌದು ಸರ್ಕಾರದ ಕಾರ್ಯದರ್ಶಿ ಈ ಒಂದು ವಿಚಾರ ಕುರಿತಂತೆ ದೆಹಲಿಯಲ್ಲಿನ ಉದಾಹರಣೆಯನ್ನು ಉಲ್ಲೇಖ ವನ್ನು ಮಾಡಿ ಯಾವುದೇ ಕಾರಣಕ್ಕೂ ಈ ಒಂದು ಪ್ರಸ್ತಾ ಪವು ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂಬ ವಿಚಾರವನ್ನು ಹೇಳಿದೆ.
ಹಾಗೇ ಇದರೊಂದಿಗೆ ಸರ್ಕಾರಿ ಕಚೇರಿಗಳ ಸಮಯ ಬದಲಾಯಿಸದಿರಲು ಸರ್ಕಾರ ನಿರ್ಧಾರವನ್ನು ಮಾಡಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಪ್ರತಿ ವರ್ಷ ಕಚೇರಿಯ ಸಮಯವನ್ನು ಬದಲಾವಣೆ ಮಾಡಲಾಗುತ್ತಿತ್ತು ಕಲಬು ರಗಿ,ವಿಜಯಪುರ,ಬೆಳಗಾವಿ, ಬಾಗಲಕೋಟ ಜಿಲ್ಲೆಗಳಲ್ಲಿ ಹೆಚ್ಚು ಬಿಸಿಲು ಇರುವ ಕಾರಣ ಪ್ರತಿ ವರ್ಷ ಸಮಯ ಬದಲಾವಣೆ ಮಾಡಲಾಗುತ್ತಿತ್ತು ಈ ಸಲ ಬೇಸಿಗೆಯಲ್ಲಿ ಕಚೇರಿ ಸಮಯ ಬದಲಾವಣೆ ಮಾಡದಿರಲು ಸರ್ಕಾರ ನಿರ್ಧಾರವನ್ನು ಮಾಡಿ ಈ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿ ಯನ್ನು ತೀರಸ್ಕಾರ ಮಾಡಿದೆ.
ಸರ್ಕಾರಿ ನೌಕರರ ಸಂಘದಿಂದ ಸಮಯ ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ದೆಹಲಿ ಯಲ್ಲಿ ಇದಕ್ಕಿಂತ ಹೆಚ್ಚು ತಾಪಮಾನ ಇದ್ದರು ಸಮಯ ಬದಲಾವಣೆ ಮಾಡಿಲ್ಲ ಹೀಗಾಗಿ ಈ ಸಲ ಸಮಯ ಬದ ಲಾವಣೆ ಮಾಡಲ್ಲ ಎಂದು ಸರ್ಕಾರದ ಕಾರ್ಯದರ್ಶಿ ತಿಳಿಸಿ ಆದೇಶವನ್ನು ಹೋರಡಿಸಿದ್ದಾರೆ.ಇದರೊಂದಿಗೆ ಸಮಯ ಬದಲಾವಣೆಯಾಗಿ ಸ್ವಲ್ಪು ಮಟ್ಟಿಗೆ ಬಿಸಿಲಿನ ತಾಪಮಾನ ದಿಂದ ತಂಪಾಗಿ ಕೆಲಸ ಮಾಡಬಹುದು ಎಂದುಕೊಂಡಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಿಸಿಲಿನ ಶಾಕ್ ನೀಡಿದೆ.