ಬೆಂಗಳೂರು –
ಕೇಂದ್ರದಷ್ಟೇ ಡಿಎ ಅನ್ನು ನೀಡಿ ಸರಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ಧಿ ಯನ್ನು ನೀಡಿದೆ.ಇನ್ನೂ ಈ ಒಂದು ಸುದ್ದಿ ಗೆ ಕಾರಣರಾದ ಯಡಿಯೂರಪ್ಪ ಅವರಿಗೂ ಮತ್ತು ಸಂಪುಟದ ನೌಕರರ ರಾಜ್ಯಾಧ್ಯಕ್ಷ ಷಡಕ್ಷರಿ ಅವರಿಗೂ ಮತ್ತು ಅವರ ಬಳಗಕ್ಕೂ ಹೃದಯಪೂರ್ವಕ ಧನ್ಯವಾದಗಳನ್ನು ರಾಜ್ಯದ ಸರ್ಕಾರಿ ನೌಕರರು ಸಲ್ಲಿಸಿದ್ದಾರೆ

ನಮ್ಮೆಲ್ಲರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘವೆಂದರೆ ಅದು ನಮ್ಮ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ KSGEA ದ ಕಾರ್ಯ ಗಳು ಎಲ್ಲರಿಗೂ ಮಾದರಿಯಾಗಿ ಕಾರ್ಯನಿರ್ವ ಹಿಸುತ್ತಿದೆ ಎನ್ನುವುದಕ್ಕೆ ಜೀವಂತ ಉದಾಹರಣೆ ಪಾರದರ್ಶಕ ಲೆಕ್ಕಾಚಾರ, ಪ್ರಾಮಾಣಿಕ ಪ್ರಯತ್ನ , ಸ್ವಂತ ಕಟ್ಟಡದ ಆಧುನೀಕರಣ, ಕೆಜಿಐಡಿ ಗಣಕೀಕರಣ,, ಕೋವಿಡ್ ಸಂಕಷ್ಟದಲ್ಲೂ ನೌಕರರ ವೇತನ ಕಡಿತವಾಗದಿರುವದು.

ನೌಕರರಿಗೆ ನಗದು ರಹಿತ ಚಿಕಿತ್ಸೆಯ ಆರೋಗ್ಯಸಿರಿ ಯೋಜನೆಗೆ ಮುನ್ನುಡಿ,ನೌಕರರಿಗೆ ಹಲವು ರೀತಿಯ ರಜಾ ಸೌಲಭ್ಯಗಳು, ಹೀಗೆ ಹಿಡಿದ ಪ್ರತಿಯೊಂದು ಕೆಲಸದಲ್ಲೂ ಸಾಧನೆಯ ಪ್ರತಿಫಲ ದೊರೆಯುತ್ತಿದೆ ಇದಕ್ಕೆ ಕಾರಣ ನಮ್ಮೆಲ್ಲರ ನೆಚ್ಚಿನ ಯುವ ನಾಯಕ ರಾದ ಷಡಕ್ಷರಿಯವರ ದಿಟ್ಟ & ಗಟ್ಟಿಯಾದ ನೇತೃ ತ್ವದ ತಂಡ,ಇವಾಗ ಕೇಂದ್ರದಷ್ಟೇ 11% ಡಿಎ ನೀಡಿ ನೌಕರರಿಗೆ ಗಿಫ್ಟ್ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಪ್ರಸ್ತುತ ಕೋವಿಡ್ ಆರ್ಥಿಕ ಸಂಕಷ್ಟದಲ್ಲೂ ಹಿಂದಿನ ಡಿಎಗಳನ್ನು ಲೆಕ್ಕಾಚಾರ ಹಾಕಿದರೆ ಜನೇವರಿ 2020 ರಿಂದ ಜುಲೈ 2021 ರವರೆಗೆ ಮೂರು ಡಿಎಗಳನ್ನು ಪ್ರೀಜ್ ಮಾಡಲಾಗಿತ್ತು. ಈ ಹಿಂದಿನ ಡಿಎ ಎಲ್ಲ ಸೇರಿಸಿ ನೋಡಿದರೆ 11% ಅತ್ಯುತ್ತಮವಾಗಿದೆ. ಇದಕ್ಕೆಲ್ಲಾ ಕಾರಣೀಕರ್ತರಾದ ನೌಕರರ ಸ್ನೇಹಿಗಳಾದ ಜನಪ್ರಿಯ ಮುಖ್ಯಮಂತ್ರಿಗಳಾದ ಮಾನ್ಯ ಯಡಿಯೂರಪ್ಪನವರು ಮತ್ತು ಅವರ ಸಂಪುಟಕ್ಕೂ ರಾಜ್ಯಾಧ್ಯಕ್ಷ ಷಡಕ್ಷರಿ ನೇತೃತ್ವದ ತಂಡಕ್ಕೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ

ಕೇಂದ್ರ ಮಾದರಿಯ ವೇತನ & ಎನ್ ಪಿ ಎಸ್ ರದ್ಧತಿ ಏನಾದರೂ ಸಾಧ್ಯವಾದರೆ ಅದೂ ನಮ್ಮ ನೌಕರರ ನಾಯಕ ಷಡಕ್ಷರಿ ಅವರ ನಾಯಕತ್ವದಲ್ಲೇ ಸಾಧ್ಯ ಈ ಎರಡು ಕಾರ್ಯಗಳನ್ನು ಕೂಡಾ ಇವರ ನೇತೃತ್ವದಲ್ಲಿ ಯಶಸ್ಸು ಪಡೆಯುವದು ಶತಃಸಿದ್ಧ ನಾಯಕನಿಗೆ ಬೆನ್ನಲುಬಾಗಿ ನಾವೆಲ್ಲಾ ನೌಕರರು ಇರೋಣ ಎಂಬ ಸಂದೇಶವನ್ನು ರಾಜ್ಯದ ನೌಕರರು ಕಳಿಸಿದ್ದಾರೆ

ಇನ್ನೂ ಇವೆಲ್ಲದರ ಜೊತೆಗೆ ಶಿಕ್ಷಕರ ವರ್ಗಾವಣೆ ವಿಚಾರ ದಲ್ಲೂ ಶಿಕ್ಷಕರು ಅಂದುಕೊಂಡಂತೆ ಆದರೆ ಸಂತೋಷ ವಿಚಾರ ಇದರ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ