ಬೆಂಗಳೂರು –
ಮಹಾಮಾರಿ ಕರೋನ ಸಂಕಷ್ಟದ ನಡುವೆಯೂ ಕೂಡಾ ರಾಜ್ಯ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ.ಹೌದು 2021-22ನೇ ಸಾಲಿನ ವೇತನ ವೆಚ್ಚದ ಬಾಬ್ತುಗಳಿಗೆ ಎರಡನೇ ಕಂತಿನ 4 ತಿಂಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ
ಹೌದು ಕಳೆದ ಹಲವು ದಿನಗಳಿಂದ ಬಾಕಿ ಉಳಿದಿದ್ದ ನಾಲ್ಕು ತಿಂಗಳದ ವೇತನದ ಅನುದಾನವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಯೋಜನೆ ವಿಭಾಗದ ಅಧೀನ ಕಾರ್ಯ ದರ್ಶಿ ಎಸ್ ಆರ್ ಎಸ್ ನಾಧನ್ ನಡವಳಿಗಳನ್ನು ಹೊರಡಿಸಿದ್ದಾರೆ.
ಪ್ರಮುಖವಾಗಿ 2021-22ನೇ ಸಾಲಿನ ಅಯವ್ಯ ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನ ಬಾಬ್ತಿಗೆ ನಿಗದಿಪಡಿಸಿರುವ ಒಟ್ಟಾರೆ ಅನುದಾನದಲ್ಲಿ 2ನೇ ಕಂತಿನ 4 ತಿಂಗಳ ಅನುದಾನ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.
ಒಟ್ಟಾರೆ ಅನುದಾನದಲ್ಲಿ ಮೊದಲನೇ ಕಂತಿನ 5 ತಿಂಗಳ ಅನುದಾನವಾಗಿ ರೂ.68,123.41 ಲಕ್ಷಗಳನ್ನು ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ಪ್ರಸ್ತುತ 2021-22ನೇ ಸಾಲಿನ ಅಯವ್ಯಯದಲ್ಲಿ 2ನೇ ಕಂತಿನ 4 ತಿಂಗಳ ಅನುದಾನ ಬಿಡುಗಡೆ ಮಾಡಿ ಅನಮತಿ ನೀಡಿ ಆದೇಶಿಸಿದ್ದು ಇದರೊಂದಿಗೆ ವೇತನವಿಲ್ಲದೇ ಸಂಕಷ್ಟದಲ್ಲಿದ್ದ ಆ ಶಿಕ್ಷಕರಿಗೆ ಸರ್ಕಾರ ನೆರವಾಗಿದೆ.