ಬೆಂಗಳೂರು –
ರಾಜ್ಯದ ಸಚಿವರು,ಸಂಸದರಿಗೆ ಮತ್ತು ಅಧಿಕಾರಿ ಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗಿಪ್ಟ್ ನೀಡಿದೆ ಹೌದು ಸರ್ಕಾರ ದಿಂದ ಸಚಿವರು,ಲೋಕಸಭಾ ಸದಸ್ಯರು ಹಾಗೂ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯ ದರ್ಶಿ ಗಳು,ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯ ಸ್ಥರು ಗಳಿಗೆ ಹೊಸ ವಾಹನ ಖರೀದಿಸೋದಕ್ಕೆ ನಿಗದಿ ಪಡಿಸಲಾ ಗಿದ್ದಂತ ಮಿತಿಯನ್ನು ಹೆಚ್ಚಳ ಮಾಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು ಸಚಿವರುಗಳಿಗೆ, ಸಂಸದ ರಿಗೆ ಹೊಸ ವಾಹನ ಖರೀದಸಲು ಆರ್ಥಿಕ ಮಿತಿಯನ್ನು ಗರಿಷ್ಠ 23 ಲಕ್ಷ ನಿಗದಿ ಪಡಿಸಲಾಗಿತ್ತು.ಈ ಮಿತಿಯನ್ನು ರೂ.23 ಲಕ್ಷದಿಂದ ರೂ.26 ಲಕ್ಷ ಗಳಿಗೆ ಹೊಸ ವಾಹನ ಖರೀದಿಸಲು ಇರುವ ಆರ್ಥಿಕ ಮಿತಿಯನ್ನು ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆ ಸಹಮತಿಸಿರುತ್ತದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಇನ್ಮುಂದೆ ಸಚಿವರು,ಲೋಕಸಭಾ ಸದಸ್ಯರುಗಳು ಉಪಯೋಗಕ್ಕಾಗಿ ವಾಹನ ಖರೀದಿಸಲು ನಿಗದಿ ಪಡಿಸಿದ ಆರ್ಥಿಕ ಮಿತಿಯನ್ನು ರೂ.23 ಲಕ್ಷಗಳಿಂದ ರೂ.26 ಲಕ್ಷ ಗಳಿಗೆ ಪರಿಷ್ಕರಿಸಿ ನಿಗದಿ ಪಡಿಸಲಾಗಿದೆ ಎಂದಿದ್ದಾರೆ.
ಇನ್ನೂ ಅಪರ ಮುಖ್ಯ ಕಾರ್ಯದರ್ಶಿಗಳು,ಪ್ರಧಾನ ಕಾರ್ಯದರ್ಶಿಗಳು,ಕಾರ್ಯದರ್ಶಿಗಳು,ಇಲಾಖಾ ಮುಖ್ಯಸ್ಥರು(ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳಾಗಿ ದ್ದಲ್ಲಿ )ಇವರುಗಳಿಗೆ ರೂ.20 ಲಕ್ಷಗಳ ಮಿತಿಯೊಳಗೆ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಗಳು,ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಗಳಿಗೆ ರೂ.18 ಲಕ್ಷಗಳು
ಇತರೆ ಜಿಲ್ಲಾ ಹಂತದ ಅಧಿಕಾರಿಗಳು, ಉಪವಿಭಾಧಿಕಾ ರಿಗಳು,ಪೊಲೀಸ್ ಉಪಾಧೀಕ್ಷಕರುಗಳಿಗೆ ರೂ.12.50 ಲಕ್ಷಗಳು ಹಾಗೂ ತಹಶೀಲ್ದಾರರುಗಳು ಮತ್ತು ಇತರೆ ಅರ್ಹ ತಾಲೂಕು ಮಟ್ಟದ ಅಧಿಕಾರಿಗಳಿಗೆ ರೂ.9 ಲಕ್ಷಗಳ ಮಿತಿಯನ್ನು ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆಯು ಸಹಮಿತಿಸಿರುತ್ತದೆ ಎಂದು ಹೇಳಿದ್ದಾರೆ.