ಬೆಂಗಳೂರು –
ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂದ ನಿಧನ ರಾಗಿರುವ ಶಿಕ್ಷಕರ ಕುರಿತಂತೆ ರಾಜ್ಯ ಸರ್ಕಾರ ಕೊನೆ ಗೂ ಎಚ್ಚೆತ್ತುಕೊಂಡಿದೆ.ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ಪ್ರತಿದಿನ ಹತ್ತುಕ್ಕೂ ಹೆಚ್ಚು ಶಿಕ್ಷಕರು ನಿಧನರಾಗಿದ್ದು ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ನಿಧನರಾಗಿದ್ದಾರೆ. ಈ ಕುರಿತಂತೆ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೂಡಾ ಈ ಒಂದು ಕೋವಿಡ್ ಸಮಯದಲ್ಲಿ ನಿಧನರಾದ ರಾಜ್ಯದಲ್ಲಿನ ಶಿಕ್ಷಕರ ಕುರಿತಂತೆ ಅವರನ್ನು ಕರೋ ನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಒತ್ತಾಯವನ್ನು ಮಾಡಿದ್ದರು.ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಮತ್ತು ಸರ್ವಸದಸ್ಯ ರು ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯವ ನ್ನುಮಾಡಿದ್ದರು.ಇವರ ಧ್ವನಿಗೆ ನಿಮ್ಮ ಸುದ್ದಿ ಸಂತೆ ನ್ಯೂಸ್ ಕೂಡಾ ಸ್ವಂದಿಸಿ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು ಇವೆಲ್ಲದರ ಪರಿಣಾಮವಾಗಿ ಕೊನೆಗೂ ರಾಜ್ಯದಲ್ಲಿನ ಶಿಕ್ಷಣ ಸಚಿವರು ಎಚ್ಚೆತ್ತು ಕೊಂಡಿದ್ದಾರೆ.
ಈವರೆಗೆ ರಾಜ್ಯದಲ್ಲಿ ಕೋವಿಡ್ ಮಹಾಮಾರಿಯಿಂ ದ ನಿಧನರಾದ ಶಿಕ್ಷಕರ ಕುರಿತಂತೆ ಮಾಹಿತಿಯನ್ನು ಕಲೆಹಾಕುವಂತೆ ಎಲ್ಲಾ ಜಿಲ್ಲೆಗಳ ಡಿಡಿಪಿಐ ಕಚೇರಿಗ ಳಿಗೆ ಮಾಹಿತಿಯನ್ನು ನೀಡಿದ್ದಾರಂತೆ ಈ ಒಂದು ವಿಚಾರವನ್ನು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿ ಗಳ ಮೂಲಗಳಿಂದ ತಿಳಿದು ಬಂದಿದ್ದು ಒಂದು ಹದಿ ನೈದುದಿನಗಳಲ್ಲಿ ಕೋವಿಡ್ ನಿಂದಾಗಿ ಮೃತರಾದ ಶಿಕ್ಷಕರಕುರಿತಂತೆ ಮಾಹಿತಿಯನ್ನು ನೀಡುವಂತೆ ಹೇಳಿದ್ದು ಮಾಹಿತಿ ಪಡೆದುಕೊಂಡು ನಂತರ ಮೃತ ರಾದ ಶಿಕ್ಷಕರ ಕುಟುಂಬಗಳಿಗೆ ಸೂಕ್ತವಾದ ಪರಿಹಾ ರವನ್ನು ಸರ್ಕಾರ ಇಲಾಖೆಗೆ ನೀಡಲಿದೆ ಇನ್ನೂ ಈ ಕುರಿತಂತೆ ಗ್ರಾಮೀಣ ಶಿಕ್ಷಕರ ಸಂಘದ ಸರ್ವ ಸದಸ್ಯರು ಕೂಡಾ ಮೇಲಿಂದ ಮೇಲಿಂದ ಮೃತರಾದ ಶಿಕ್ಷಕರಿಗೆ ಸೂಕ್ತವಾದ ಪರಿಹಾರವನ್ನು ನೀಡಿ ಹಾಗೇ ಅವರನ್ನು ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಎಂದು ಒತ್ತಾಯ ಮಾಡಿದ್ದರು ಇವರ ಕೂಗಿಗೆ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಅದರಲ್ಲೂ ಶಿಕ್ಷಣ ಇಲಾಖೆ ಈಗ ಎಚ್ಚೇತ್ತುಕೊಂಡು ಮೃತರಾದ ಶಿಕ್ಷಕರ ಮಾಹಿತಿಯನ್ನು ಪಡೆದುಕೊಳ್ಳು ತ್ತಿದ್ದು ಇದೊಂದು ಗ್ರಾಮೀಣ ಶಿಕ್ಷಕರ ಹೋರಾಟಕ್ಕೆ ಸಂದಜಯವಾಗಿದೆ.
ಗ್ರಾಮೀಣ ಶಿಕ್ಷಕರ ಸಂಘ ಯಾವಾಗಲೂ ಶಿಕ್ಷಕ ರೊಂದಿಗೆ ಶಿಕ್ಷಕರ ಸಮಸ್ಯೆಗಳಿ ಗೆ ಸಂಘದ ಸರ್ವ ಸದಸ್ಯರು ಸ್ಪಂದಿಸುತ್ತಾರೆ ಮತ್ತೊ ಮ್ಮೆ ಕರೋನಾ ಕುರಿತಂತೆ ಭಯ ಬೇಡ ಬಂಧುಗಳೇ ಕಾಳಜಿ ಇರಲಿ ಮನೆಯಲ್ಲಿ ಇರಿ ಹುಷಾರಾಗಿರಿ ಇನ್ನೂ ಈ ಒಂದು ನಿರ್ಧಾರವನ್ನು ಕೈಗೊಂಡ ಇಲಾ ಖೆಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ರಾಜ್ಯ ಘಟಕ ಹುಬ್ಬಳ್ಳಿ ಯ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಸರ್ವ ಪದಾಧಿ ಕಾರಿಗಳು ಅಭಿನಂದನೆಗಳನ್ನು ಹೇಳಿದ್ದಾರೆ.