ಬೆಂಗಳೂರು –
ಸರ್ಕಾರಿ ಶಾಲೆಗಳಲ್ಲಿ ಅಥಿತಿ ಶಿಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಶಿಕ್ಷಕರ ಬಹು ವರ್ಷದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಅಥಿತಿ ಶಿಕ್ಷಕರ ಗೌರವ ಧನವನ್ನು ಏರಿಕೆ ಮಾಡಿ ಸರ್ಕಾರ ಆದೇಶವನ್ನು ಮಾಡಿದೆ.ಸರ್ಕಾರಿ ಪ್ರಾಥಮಿಕ ಅತಿಥಿ ಶಿಕ್ಷಕರ ಗೌರವ ಧನವನ್ನು 7,500 ಗಳಾಗಿತ್ತು ಈಗ ಅದನ್ನು ಹೆಚ್ಚಳ ಮಾಡಲಾಗಿದೆ
ಈ ಗೌರವ ಧನವನ್ನು 10,000ಕ್ಕೆ ಏರಿಕೆಯನ್ನು ಮಾಡಿದೆ. ಪ್ರೌಢಶಾಲೆಯ ಶಿಕ್ಷಕರಿಗೆ 8,000 ಗೌರವ ಧನವನ್ನು ನೀಡ ಲಾಗುತ್ತಿತ್ತು.ಇದೀಗ ಈ ಗೌರವ ಧನವನ್ನು 10,500ಕ್ಕೆ ಏರಿಕೆಯನ್ನು ಮಾಡುವ ಮೂಲಕ ಅಥಿತಿ ಶಿಕ್ಷಕರಿಗೆ ಶುಭ ಸುದ್ದಿಯನ್ನು ಸರ್ಕಾರ ನೀಡಿದೆ.ಅಥಿತಿ ಶಿಕ್ಷಕರ ಗೌರವ ಧನ ಹೆಚ್ಚಾಗಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಯ ಸಚಿವ ಬಿ. ಸಿ. ನಾಗೇಶ್ ಟ್ವೀಟ್‌ನಲ್ಲಿ ಖಚಿತ ಪಡಿಸಿ ದ್ದಾರೆ.ಅಥಿತಿ ಶಿಕ್ಷಕರ ಬಹುಕಾಲದ ಬೇಡಿಕೆಯನ್ನು ನೆರವೇ ರಿಸುವ ನಿಟ್ಟಿನಲ್ಲಿ ಬೇಡಿಕೆ ಕೇಳಿಬಂದಿತ್ತು.ಸರ್ಕಾರಿ ಶಾಲೆ ಗಳ ಅಥಿತಿ ಶಿಕ್ಷಕರ ಮಾಸಿಕ ಗೌರವ ಸಂಭಾವನೆ ಪರಿಷ್ಕ ರಿಸಿ ಮನವಿಗೆ ಸ್ಪಂದಿಸಿ ರೂ. 2500 ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದನೆಯನ್ನು ಸಚಿವರು ಸಲ್ಲಿಸಲಾಗಿದೆ.