This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯ ಸರ್ಕಾರಿ ನೌಕರರಿಗೆ ರಜೆ ವಿಚಾರದಲ್ಲಿ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ…..

WhatsApp Group Join Now
Telegram Group Join Now

ಬೆಂಗಳೂರು –

ಹೌದು ರಾಜ್ಯದ ಸರ್ಕಾರಿ ನೌಕರರಿಗೆ ರಜೆ ಯನ್ನು ಪಡೆಯುವ ವಿಚಾರ ದಲ್ಲಿ ರಾಜ್ಯ ಸರ್ಕಾರ ಸ್ಪಂದಿಸಿ ಗುಡ್ ನ್ಯೂಸ್ ನೀಡಿದೆ.ಮಗುವಿನ ಪಾಲನೆಯ ಹೊಣೆಹೊತ್ತ ಒಂಟಿ ಪೋಷಕ ಪುರುಷ ನೌಕರರಿಗೂ 6 ತಿಂಗಳ ಶಿಶುಪಾಲನಾ ರಜೆ ಪಡೆಯುವ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.

18 ವರ್ಷಗಳ ಒಳಗಿರುವ ಮಕ್ಕಳ ಪಾಲನೆಯ ಹೊಣೆ ಹೊತ್ತಿರುವ ವಿಚ್ಛೇದಿತ,ವಿದುರ, ಅವಿವಾ ಹಿತ ನೌಕರರು 180 ದಿನಗಳಿಗೆ ಮೀರದಂತೆ ರಜೆ ಸೌಲಭ್ಯ ಪಡೆಯಬಹುದಾಗಿದೆ ಎಂಬ ಆದೇಶ ನೀಡಿ ಅವಕಾಶಗಳನ್ನು ನೀಡಲಾಗಿದೆ

ರಜೆ ಮಂಜೂರು ಮಾಡುವ ಪ್ರಾಧಿಕಾರವು ಜೂನ್ 2021ರ ಸರ್ಕಾರಿ ಆದೇಶದಲ್ಲಿನ ಇತರೆ ನಿಯಮಗಳನ್ನು ಪಾಲಿಸಬೇಕು.ಒಂದು ವೇಳೆ ಮರು ಮದುವೆಯಾದರೆ ರಜೆ ಸೌಲಭ್ಯ ರದ್ದಾ ಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಪುರುಷ ನೌಕರರಿಗೂ ಈ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಸಧ್ಯ ಈ ಒಂದು ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಆದೇಶ ವನ್ನು ಮಾಡಿ ಶುಭ ಸುದ್ದಿ ಯನ್ನು ನೀಡಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk