ಮಹಾನಗರ ಪಾಲಿಕೆಯ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ರಾಜ್ಯದ 10 ಮಹಾನಗರ ಪಾಲಿಕೆಯ ನೌಕರರಿಗೆ 7ನೇ ವೇತನ ಆಯೋಗ ವಿಸ್ತರಣೆ ಆದೇಶ……

Suddi Sante Desk
ಮಹಾನಗರ ಪಾಲಿಕೆಯ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ – ರಾಜ್ಯದ 10 ಮಹಾನಗರ ಪಾಲಿಕೆಯ ನೌಕರರಿಗೆ 7ನೇ ವೇತನ ಆಯೋಗ ವಿಸ್ತರಣೆ ಆದೇಶ……

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಜಾರಿಗೆ ಬೆನ್ನಲ್ಲೇ ಈ ಒಂದು ವೇತನವನ್ನು ಇನ್ನೂಳಿದ ಒಂದೊಂದು ಇಲಾಖೆಯ ನೌಕರರಿಗೆ ವಿಸ್ತರಣೆ ಮಾಡಲಾಗುತ್ತಿದ್ದು ಸಧ್ಯ ರಾಜ್ಯದ 10 ಮಹಾನಗರ ಪಾಲಿಕೆಗಳ ಖಾಯಂ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನನ್ವಯ ಪರಿಷ್ಕೃತ ವೇತನ ಶ್ರೇಣಿಯ ಸೌಲಭ್ಯವನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

09.07.2018ರ ಆದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿಯನ್ನು ಪರಿಷ್ಕರಿಸಿದ ಸರ್ಕಾರದ ಆದೇಶ ಸಂಖ್ಯೆ ಎಫ್‌ಡಿ 06 ಎಸ್‌ಆರ್‌ಪಿ 2018, ದಿನಾಂಕ: 01.03.2018 ಮತ್ತು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 06 ಎಸ್‌ಆರ್‌ಪಿ 2018, ದಿನಾಂಕ: 19.04.2018 ರಲ್ಲಿನ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ,ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿ ಸೌಲಭ್ಯವನ್ನು ದಿನಾಂಕ: 01.07.2017 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದೆ.

ವೇತನ ಪರಿಷ್ಕರಣೆಯ ಆರ್ಥಿಕ ಸೌಲಭ್ಯವು ದಿನಾಂಕ: 01.04.2018 ರಿಂದ ಜಾರಿಗೆ ಬರುವಂತೆ ಯಥಾವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ. 22.07.2024ರ ಆದೇಶದಲ್ಲಿ, 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಿ, ಅದರಂತೆ ರಾಜ್ಯ ಸರ್ಕಾರಿ ನೌಕರರ ಮುಖ್ಯವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಹಾಗೂ ಪಿಂಚಣಿಯನ್ನು ದಿನಾಂಕ: 01.07.2022 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿ ಸಲಾಗಿರುತ್ತದೆ.

ಈ ಆದೇಶದ ಕಂಡಿಕೆ (8) ರಲ್ಲಿ ಅನ್ವಯಿಸುವ ಬದಲಾವಣೆಗಳೊಂದಿಗೆ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಭೋದಕೇತರ ಸಿಬ್ಬಂದಿಗಳಿಗೂ ಸಹಾ ಯಥಾವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

17.08.2024ರ ಅಧಿಸೂಚನೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 2024ನ್ನು ರಚಿಸಲಾಗಿರುತ್ತದೆ.23.08.2024ರ ಆದೇಶದಲ್ಲಿನ ಕಂಡಿಕೆ 11.1 ರಲ್ಲಿ ಪರಿಷ್ಕೃತ ವೇತನ ಶ್ರೇಣಿಗಳ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತುವಿಶ್ವವಿದ್ಯಾಲಯಗಳ ಭೋದಕೇತರ ಸಿಬ್ಬಂದಿ ಗಳಿಗೂ ಸಹಾ ವಿಸ್ತರಿಸಲಾಗಿರುತ್ತದೆ. ಈ ಕುರಿತಂತೆ ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಪ್ರತ್ಯೇಕವಾಗಿ ಹೊರಡಿಸಿಲಾಗಿದೆ

02.09.2024ರ ಪತ್ರದಲ್ಲಿ ಜಂಟಿ ನಿರ್ದೇಶಕರು (ಹಣಕಾಸು), ಪೌರಾಡಳಿತ ನಿರ್ದೇಶನಾಲಯ ರವರು, ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ 21 ಎಸ್‌ಆರ್‌ಪಿ 2024, ದಿನಾಂಕ: 22.07.2024 ರ ಆದೇಶದಲ್ಲಿ, 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನನ್ವಯ ಪರಿಷ್ಕೃತ ವೇತನ ಶ್ರೇಣಿಗಳನ್ನು ಅಂಗೀಕರಿಸಿ, ಕಂಡಿಕೆ (8) ರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳಿಗೆ ಈ ಸೌಲಭ್ಯವನ್ನು ಯಥಾ ವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ .

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.