ಬೆಂಗಳೂರು –
ದೀಪಾವಳಿ ಸಮಯದಲ್ಲಿ ರಾಜ್ಯ ಪೊಲೀಸ್ ಕುಟುಂಬ ಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು ರಾಜ್ಯ ಪೊಲೀಸರಿಗೆ ಇದ್ದ ವಿಶೇಷ ಗುಂಪು ವಿಮಾ ಯೋಜನೆ ಮೊತ್ತ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇಲ್ಲಿಯ ವರೆಗೂ ಗುಂಪು ವಿಮಾನ ಯೋಜನೆಯ ಮೊತ್ತ 20 ಲಕ್ಷ ರೂಪಾಯಿ ಆಗಿತ್ತು.ಈಗ ಈ ಮೊತ್ತವನ್ನು 50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಕರ್ತವ್ಯದಲ್ಲಿ ಇರುವಾಗ ಪೊಲೀಸರು ಆಕಸ್ಮಿಕವಾಗಿ ಅಪಘಾತದಲ್ಲಿ ಮೃತಪಟ್ಟರೆ ನೀಡುವ ವಿಮಾ ಮೊತ್ತ ಇದಾಗಿದೆ. ಫಾಲೋವರ್, ಪಿಸಿಯಿಂದ ಡಿಜಿ & ಐಜಿಪಿ ವರೆಗೆ ವಿಮಾ ಯೋಜನೆ ಅನ್ವಯವಾಗಲಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.
ಈಗ ಚಾಲ್ತಿಯಲ್ಲಿರುವ ಗುಂಪು ವಿಮಾನ ಯೋಜನೆ ಅಕ್ಟೋಬರ್ 10ಕ್ಕೆ ಮುಕ್ತಾಯಗೊಂಡಿದೆ.ಅಕ್ಟೋಬರ್ 11 ರಿಮದ ಅನ್ವಯವಾಗುವಂತೆ ರಾಜ್ಯ ಎಲ್ಲಾ ಪೊಲೀಸ್ ಅಧಿಕಾರಿಗಳು ಆಕಸ್ಮಿಕವಾಗಿ ಅಪಘಾತ ದಲ್ಲಿ ಮೃತಪಟ್ಟರೆ, ಮೃತರ ಕುಟುಂಬಕ್ಕೆ ವಿಶೇಷ ಗುಂಪು ವಿಮಾನ ಮೊತ್ತ 50 ಲಕ್ಷ ರೂಪಾಯಿಯನ್ನು ನೇರವಾಗಿ ಇಲಾಖೆಯಿಂದಲೇ ನೀಡಲಾಗುತ್ತದೆ ಎಂದು ತಿಳಿಸಲಾ ಗಿದೆ.
ಸ್ವಾಭಾವಿಕ ಮರಣಗಳಾದ ಕಾಯಿಲೆ, ಹೃದಯಾಘಾತ ಹಾಗೂ ಆತ್ಮಹತ್ಯೆಯಂಥ ಪ್ರಕರಣಗಳನ್ನು ಇದರಲ್ಲಿ ಹೊರತುಪಡಿಸಲಾಗಿದೆ.ಘಟಕಾಧಿಕಾರಿಗಳು ಕರ್ತವ್ಯದ ಮೇಲಿರುವಾಗ ಆಕಸ್ಮಿಕ,ಅಪಘಾತದಲ್ಲಿ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿಯನ್ನು ಈ-ಮೇಲ್ ಫ್ಯಾಕ್ಸ್ ssactco@ksp.gov.in ಮೂಲಕ ಅಥವಾ ಖುದ್ದಾಗಿ ನಿಗದಿತ ಸಮಯದೊಳಗೆ ನೀಡಬೇಕಿರುತ್ತದೆ.
ಕ್ಲೈಮ್‌ಗೆ ಸಂಬಂಧಿಸಿದಂತೆ ಪ್ರಕರಣವು ಅರ್ಹ ಪ್ರಕರಣವೇ ಎಂಬ ಬಗ್ಗೆ ಪರಿಶೀಲಿಸಿ, ಸಂಪೂರ್ಣ ಮಾಹಿತಿಯನ್ನು ಮೇಲಧಿಕಾರಿಗಳ ಶಿಫಾರಸಿನೊಂದಿಗೆ ಅಗತ್ಯ ದಾಖಲೆಗಳನ್ನು 30 ದಿನಗಳ ಒಳಗಾಗಿ ಕಚೇರಿಗೆ ಸಲ್ಲಿಸಬೇಕು. ನಿಗದಿತ ಸಮಯದಲ್ಲಿ ಸಲ್ಲಿಕೆ ಮಾಡದೇ ವಿನಾ ಕಾರಣ ವಿಳಂಬ ಮಾಡಿದಲ್ಲಿ ಅದಕ್ಕೆ ಘಟಕಾಧಿ ಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸ ಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..