ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ – ವರ್ಗಾವಣೆ ಸೇರಿದಂತೆ ಎಲ್ಲದಕ್ಕೂ ನೆರವಾಗಲಿದೆ ಈ App

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ಸೇರಿದಂತೆ ಇತರೆ ಸಮಸ್ಯೆ ಅರ್ಜಿ ಸಲ್ಲಿಕೆ ದಾಖಲೆ ಸಲ್ಲಿಕೆ ಮಾಡಲು ಹಾಗೇ ಶಿಕ್ಷಕರ ಪರದಾಟ ವನ್ನು ತಪ್ಪಿಸಲು ರಾಜ್ಯ ಸರ್ಕಾರ ಅದರಲ್ಲೂ ಶಿಕ್ಷಣ ಇಲಾಖೆ ಆಪ್ಲಿಕೇಶನ್ ವೊಂದನ್ನು ಸಿದ್ದಮಾಡಿದ್ದು ಬಿಡು ಗಡೆ ಮಾಡಿದೆ ಶಿಕ್ಷಣ ಇಲಾಖೆ.ಹೌದು ರಾಜ್ಯ ಸರ್ಕಾರವು ಶಿಕ್ಷಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು ವರ್ಗಾವಣೆ ಸೇರಿದಂತೆ ಶಿಕ್ಷಕರು ತಮ್ಮ ದಾಖಲೆಗಳನ್ನು ಆನ್ ಲೈನ್ ನಲ್ಲಿ ನಿರ್ವಹಿಸಲು ಸಹಾಯ ಮಾಡಲು ರಾಜ್ಯ ಸರ್ಕಾರವು ಕರ್ನಾಟಕ ಶಿಕ್ಷಕ ಮಿತ್ರ ಆಯಪ್ ಬಿಡುಗಡೆ ಮಾಡಿದೆ. ಕರ್ನಾಟಕ ಶಿಕ್ಷಣ ಇಲಾಖೆಯು ಶಿಕ್ಷಕ ಮಿತ್ರ ಎಂಬ ಮೊಬೈಲ್ ಅಪ್ಲಿಕೇಷನ್ ಸಿದ್ದಪಡಿಸಿದ್ದು ಶಿಕ್ಷಕರ ವರ್ಗಾವ ಣೆಗೆ ಸಂಬಂಧಿಸಿದಂತೆ ಅರ್ಜಿಗಳು,ಶಿಕ್ಷಕರು ತಮ್ಮ ಕೆಲಸ ಗಳಿಗಾಗಿ ಶಾಲೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆ ದಾಡುವುದನ್ನು ತಪ್ಪಿಸಲು ಈ ಅಪ್ಲಿಕೇಷನ್ ಸಿದ್ದಪಡಿಸಲಾ ಗಿದೆ.

ಇನ್ನು ಶಿಕ್ಷಕರು ಈ ಅಪ್ಲಿಕೇಷನ್ ಮೂಲಕ ರಜಾ ಅರ್ಜಿ, ನಿಯಮ 32 ಮತ್ತು ನಿಯಮ 68 ರ ಅಡಿಯ್ಲಲಿ ಶುಲ್ಕ ಭತ್ಯೆ ಮಂಜೂರಾತಿ, ದೈಹಿಕ ಅಂಗವಿಕಲ ಭತ್ಯೆಯ ಮಂಜೂರಾತಿ,ಮುಂಗಡಗಳನ್ನು ಪಡೆಯಲು ಅನುಮತಿ, ಭಾಗಶಃ ಹಿಂತೆಗೆದುಕೊಳ್ಳುವಿಕೆ ಅಥವಾ ಸಾಮಾನ್ಯ ಭವಿಷ್ಯ ನಿಧಿಯ ಅಂತಿಮ ಇತ್ಯರ್ಥ,ನಿಯಮ 247A/248/252B/224A ಅಡಿಯಲ್ಲಿ ಪಿಂಚಣಿ ಪ್ರಯೋಜನಗ ಳಿಗಾಗಿ ಉದ್ಯೋಗಿ ಅರ್ಹತಾ ಸೇವೆ,ಮನೆ ನಿರ್ಮಿಸಲು ಅಥವಾ ನಿವೇಶನ/ಮನೆ/ವಾಹನ ಅಥವಾ ಇತರೆ ಯಾವುದೇ ಚರ ಅಥವಾ ಸ್ಥಿರ ಆಸ್ತಿಗಳನ್ನು ಖರೀದಿಸಲು ಅನುಮತಿ ಮತ್ತು ಉದ್ಯೋಗಿ ಸಂಖ್ಯೆ – ಪಾಸ್‌ಪೋರ್ಟ್ ಮಾಡ್ಯೂಲ್‌ಗೆ ಅರ್ಜಿ ಸಲ್ಲಿಸಲು ಆಕ್ಷೇಪಣೆ ಪ್ರಮಾಣಪತ್ರ ಸೇರಿದಂತೆ ಹಲವು ಸೇವೆಗಳು ಶಿಕ್ಷಕ ಮಿತ್ರ ಆಯಪ್ ನಲ್ಲಿ ಲಭ್ಯವಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.