ಸಮಸ್ತ ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ – ಏಪ್ರಿಲ್ ತಿಂಗಳೊಳಗಾಗಿ ಈ ಒಂದು ಕೆಲಸ ಮಾಡಿ ಖಡಕ್ ಸೂಚನೆ ನೀಡಿದ ರಾಜ್ಯ ಸರ್ಕಾರ…..

Suddi Sante Desk
ಸಮಸ್ತ ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ – ಏಪ್ರಿಲ್ ತಿಂಗಳೊಳಗಾಗಿ ಈ ಒಂದು ಕೆಲಸ ಮಾಡಿ ಖಡಕ್ ಸೂಚನೆ ನೀಡಿದ ರಾಜ್ಯ ಸರ್ಕಾರ…..

ಬೆಂಗಳೂರು

ಸಮಸ್ತ ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ  ಏಪ್ರಿಲ್ ತಿಂಗಳೊಳಗಾಗಿ ಈ ಒಂದು ಕೆಲಸ ಮಾಡಿ ಖಡಕ್ ಸೂಚನೆ ನೀಡಿದ ರಾಜ್ಯ ಸರ್ಕಾರ

ರಾಜ್ಯದ ಸರ್ಕಾರಿ ನೌಕರರು ಆಸ್ತಿ ಮತ್ತು ಋಣ ಪಟ್ಟಿಯನ್ನು ಸಲ್ಲಿಕೆ ಮಾಡುವ ಕುರಿತಂತೆ ರಾಜ್ಯ ಸರ್ಕಾರ ಸೂಚನೆಯನ್ನು ನೀಡಿದ್ದು ಈ ಒಂದು ಕುರಿತು ಮಹತ್ವದ ಮಾಹಿತಿಯನ್ನು ನೌಕರರಿಗೆ ನೀಡಲಾಗಿದೆ.2023 24ನೇ ಸಾಲಿಗೆ ಸಂಬಂಧಿಸಿ ದಂತೆ ಎಲ್ಲಾ ನೌಕರರು,ಅಧಿಕಾರಿಗಳು ಆಸ್ತಿ ಮತ್ತು ಋಣ ಪಟ್ಟಿಯನ್ನು ಏಪ್ರಿಲ್ ತಿಂಗಳ ಅಂತ್ಯದೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಅಧಿಕೃತ ಜ್ಞಾಪನ ಹಾಗೂ ಸುತ್ತೋಲೆ ಯಲ್ಲಿ ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸಬೇಕೆಂ ತಲೂ ಮತ್ತು ಈ ಪಟ್ಟಿಯನ್ನು ಸಕ್ಷಮ ಪ್ರಾಧಿಕಾ ರಿಗಳು ಪರಿಶೋಧಿಸಬೇಕೆಂತಲೂ ಸೂಚನೆ ನೀಡಲಾಗಿದೆ.

ಈ ಕೆಳಕಂಡ ಮಾರ್ಗ ಸೂಚಿಗಳನ್ನು ನೀಡಲಾಗಿದೆ
ಎಲ್ಲಾ ಸರ್ಕಾರಿ ನೌಕರರು(ಗ್ರೂಪ್-ಡಿ ನೌಕರರನ್ನೂ ಒಳಗೊಂಡಂತೆ)ನಡತೆ ನಿಯ ಮಗಳ 24ರ ಉಪ ನಿಯಮ(2) ರ ತಮ್ಮ ವಾರ್ಷಿಕ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಮಾರ್ಚ್ 31-2024ಕ್ಕೆ ಅಂತ್ಯಗೊಂಡಿರುವಂತೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ನಿಗದಿತ ಪ್ರಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.

ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರಿಗೆ ಸಂಬಂ ಧಿಸಿದಂತೆ ಆಯಾ ಜಿಲ್ಲಾ ಮಟ್ಟದಲ್ಲಿರುವ ಖಜಾನೆ ಇಲಾಖಾ ಕಚೇರಿಯ,ಕಚೇರಿ ಮುಖ್ಯಸ್ಥರು ಪರಿಶೋಧಿಸುವ ಪ್ರಾಧಿಕಾರಿಗಳಾ ಗಿರುತ್ತಾರೆ.ಪರಿಶೋಧಿಸುವ ಪ್ರಾಧಿಕಾರಿಗಳು ಈ ಪಟ್ಟಿಯಲ್ಲಿ ತೋರಿಸಿರುವ ವ್ಯವಹಾರಗಳು ನಿಯಮಬದ್ಧವಾಗಿದೆಯೇ ಮತ್ತು ನೌಕರರು ಗಳಿಸಿರುವ ಆಸ್ತಿಯು ಅವರು ಸಂಪಾದಿಸಿದ ಆದಾಯಕ್ಕೆ ಅನುಗುಣವಾಗಿದೆಯೇ ಎಂಬು ದನ್ನು ಅತಿ ಜಾಗರೂಕವಾಗಿ ಪರಿಶೋಧಿಸಬೇಕು

ಹಾಗೆ ಪರಿಶೋಧಿಸಿದ ನಂತರ ಯಾವ ನೌಕರನ ಆಸ್ತಿ ಅವನು ಸಂಪಾದಿಸಿದ ಆದಾಯಕ್ಕಿಂತ ಹೆಚ್ಚಾಗಿದ್ದು, ಅದಕ್ಕೆ ಸಮರ್ಥನೆಯನ್ನು ಆತ ಕೊಡದಿದ್ದಲ್ಲಿ ಅವನ ಮೇಲೆ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಅಂತಹ ಪ್ರಕರಣ ಗಳನ್ನು ತಪಾಸಣೆಗಾಗಿ ಲೋಕಾಯುಕ್ತಕ್ಕೆ ತಪಾಸಣೆ ಮಾಡಲು ವಹಿಸುವ ಕ್ರಮವನ್ನು ತೆಗೆದುಕೊಳ್ಳಬೇಕು.

ಹೀಗೆ ಪರಿಶೋಧಿಸಿದ ಫಲಿತಾಂಶವನ್ನು ದೃಢೀ ಕರಣದೊಂದಿಗೆ ಖಜಾನೆ ಆಯುಕ್ತಾಲಯಕ್ಕೆ 2 ತಿಂಗಳೊಳಗಾಗಿ ತಿಳಿಸಬೇಕು.ಗ್ರೂಪ್ ‘ಸಿ’ ಮತ್ತು ‘ಡಿ’ ನೌಕರರಿಗೆ ಸಂಬಂಧಿಸಿದ ಆಸ್ತಿ ಮತ್ತು ಋಣ ಪಟ್ಟಿಯನ್ನು ಖಜಾನೆ ಆಯುಕ್ತಾಲಯಕ್ಕೆ ಕಳುಹಿ ಸುವ ಅಗತ್ಯವಿರುವುದಿಲ್ಲ.ಆಯಾ ಜಿಲ್ಲಾ ಖಜಾನೆಯ ಹಂತದಲ್ಲಿ ಅದನ್ನು ನಿಯಮಾ ನುಸಾರ ಇರಿಸಿಕೊಳ್ಳಲು ಸೂಚಿಸಲಾಗಿದೆ ಹಾಗೂ ಅಗತ್ಯಬಿದ್ದಾಗ ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ ಅದನ್ನು ಖಜಾನೆ ಆಯುಕ್ತಾಲ ಯಕ್ಕೆ ತರಿಸಿಕೊಳ್ಳುವ ಅವಕಾಶ ಖಜಾನೆ ಆಯುಕ್ತಾಲಯ ಹೊಂದಿರುತ್ತದೆ.

ಗ್ರೂಪ್’ಎ’ಮತ್ತು’ಬಿ’ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಏಪ್ರಿಲ್ ಅಂತ್ಯ ದೊಳಗೆ ಖಜಾನೆ ಆಯುಕ್ತಾಲಯಕ್ಕೆ ಸಲ್ಲಿಸು ವಂತೆ ಕ್ರಮ ಕೈಗೊಳ್ಳುವುದು.ಈ ನಿಯಮ ಹಾಗೂ ಸೂಚನೆಗಳನ್ನು ನಿರ್ಲಕ್ಷಿಸುವ ನೌಕರರ ಅಧಿಕಾರಿಗಳ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.