ಬೆಂಗಳೂರು –
ರಾಜ್ಯ ಸರ್ಕಾರಿ ಅಧಿಕಾರಿ,ನೌಕರನು ಡಿಸೆಂಬರ್ 31-12- 2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿಯನ್ನು ಹೊಂದಲು ಅರ್ಹನಾಗಿರುವುದಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ಖಡಕ್ ಆದೇಶದಲ್ಲಿ ತಿಳಿಸಿದೆ.

ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಇ-ಆಡ ಳಿತ ಕೇಂದ್ರ ಸಾಮರ್ಥ್ಯ ಸಂಘಟನೆಯ ಯೋಜನಾ ನಿರ್ದೇಶಕರು ಪತ್ರ ಬರೆದಿದ್ದುಒಟ್ಟು ಸುಮಾರು 5,40,000 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರುಗಳು ಕಂಪ್ಯೂ ಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದುವಂತೆ ಸರ್ಕಾರವು ಆದೇಶ ನೀಡಿರುತ್ತದೆ.ಈ ಹಿನ್ನಲೆಯಲ್ಲಿ ಈವರೆಗೆ 2,60,000ಕ್ಕೂ ಹೆಚ್ಚು ಅಧಿಕಾರಿ ಗಳು ಮತ್ತು ನೌಕರರುಗಳು ಪರೀಕ್ಷೆಯನ್ನು ತೆಗೆದುಕೊಂ ಡಿದ್ದು ಅವರಲ್ಲಿ 1,73,500 ಅಧಿಕಾರಿಗಳು ಮತ್ತು ನೌಕರರು ಉತ್ತೀರ್ಣರಾಗಿದ್ದು ಎಲ್ಲರಿಗೂ ಡಿಜಿಟಲ್ ಪ್ರಮಾಣಪತ್ರ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ಸುಮಾರು 3,50,000ಕ್ಕೂ ಹೆಚ್ಚು ಸರ್ಕಾರಿ ಅಧಿಕಾ ರಿಗಳು ಮತ್ತು ನೌಕರರುಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳಬೇಕಾಗಿರುವುದರಿಂದ ಸರ್ಕಾರವು ದಿನಾಂಕ 31-12-2022ರವರೆಗೆ ಸಮಯಾವಕಾಶ ನೀಡಿದೆ ಈ ಹಿನ್ನಲೆಯಲ್ಲಿಉತ್ತೀರ್ಣರಾಗದಂತ ಸರ್ಕಾರಿ ನೌಕರರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತಮ್ಮ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿ,ನೌಕರರ ವಿವರಗ ಳನ್ನು ನೀಡುವಂತೆ ಕೋರಿದ್ದಾರೆ.


ಇದಷ್ಟೇ ಅಲ್ಲದೇ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳದಿರುವ ಅಧಿಕಾರಿ ಮತ್ತು ನೌಕರರುಗಳಿಗೆ ಆಯಾ ಇಲಾಖೆಯ ಮೇಲಧಿಕಾರಿಗಳು ಮಾಹಿತಿ ನೀಡು ವಂತೆ ಕೋರಲಾಗಿದೆ.ಈ ಹಿನ್ನಲೆಯಲ್ಲಿ ತಮ್ಮ ಜಿಲ್ಲೆಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳದಿ ರುವ ಅಧಿಕಾರಿ ನೌಕರರುಗಳ ವಿವರಗಳನ್ನು ತುರ್ತಾಗಿ ಸಲ್ಲಿಸುವಂತೆಯೂ ಕೋರಿ ನಿರ್ದೇಶಿಸಿದ್ದಾರೆ.