ಬೆಂಗಳೂರು –
6 ರಿಂದ 8ನೇ ತರಗತಿಯ 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸೋಮವಾರ ಅಧಿಸೂಚನೆ ಹೊರಬೀಳುತ್ತಿ ದ್ದಂತೆ ಇತ್ತ ಈ ಒಂದು ಪ್ರಕ್ರಿಯೆಗೆ ತಡೆಯಾಜ್ಞೆಯನ್ನು ತರಲು ಸಿದ್ದತೆಯನ್ನು ಮಾಡಲಾಗಿತ್ತು ಈ ಒಂದು ವಿಚಾರವು ಇಲಾಖೆಗೆ ಗೊತ್ತಾಗುತ್ತಿದ್ತಂತೆ ಇತ್ತ ಇದರಿಂದ ಎಚ್ಚೇತ್ತುಕೊಂಡ ಶಿಕ್ಷಣ ಇಲಾಖೆಯು ಕೆಲವೊಂದಿಷ್ಟು ಮಾರ್ಪಾಡುಗಳನ್ನು ತಂದಿದೆ ಹೌದು 6ರಿಂದ 8ನೇ ತರಗ ತಿಯ 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸೋಮವಾರ ಅಧಿಸೂಚನೆ ಹೊರಡಿಸಲಾಗಿತ್ತು.ಅದರಲ್ಲಿ ಶಿಕ್ಷಣ ಇಲಾಖೆ ಮಾರ್ಪಾಡು ತಂದಿದ್ದು ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗಳ ಸಂಖ್ಯೆಯನ್ನು 250 ರಿಂದ 557ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗಳ ಹೆಚ್ಚಳದ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್ 15,000 ಶಿಕ್ಷಕರ ನೇಮಕ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದ ವಿಷಯವಾರು ಹುದ್ದೆಗಳ ಮರು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನೇಮಕಾತಿಯ ಸಂಪೂರ್ಣ ವಿವರ ಅಧಿಸೂಚನೆಯಲ್ಲಿದೆ. ಏಪ್ರಿಲ್ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸಾಮಾನ್ಯ ವರ್ಗದವರು 1,250 ರೂ. ಹಾಗೂ ಎಸ್.ಸಿ, ಎಸ್.ಟಿ ವರ್ಗದವರಿಗೆ 625 ರೂ. ಅರ್ಜಿ ಶುಲ್ಕ ನಿಗದಿಪಡಿ ಸಲಾಗಿದೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ.ಒಟ್ಟಾರೆ ಒಂದೇ ಒಂದು ಗುಡುಗು ಬೀಳುತ್ತಿದ್ದಂತೆ ಇದರಿಂದ ಎಚ್ಚೇತ್ತುಕೊಂಡ ಇಲಾಖೆ ಶಿಕ್ಷಣ ಸಚಿವರು ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡಿ ಆದೇಶವನ್ನು ಹೊರಡಿಸಿ ದ್ದಾರೆ.