ಬೆಂಗಳೂರು –
ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಕೊರೊನಾ ವಾರಿಯ ರ್ ಗಳಾಗಿ ಕಾರ್ಯ ನಿರ್ವಹಿಸಿ ಮೃತಪಟ್ಟಿರುವ ನೌಕರರಿಗೆ ಪರಿಹಾರ ನೀಡಲು 6.9 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.ರಾಜ್ಯ ಸರಕಾರಿ ಪ್ರೌಢಶಾಲೆ ಗಳಲ್ಲಿ 2021-22ನೇ ಸಾಲಿನಲ್ಲಿ ಶಾಲೆಗಳ ನಿರ್ವಹಣೆಗೆ ಯಾವುದೇ ಅನುದಾನವನ್ನು ನಿಗದಿ ಮಾಡಿಲ್ಲ
.
ವಿದ್ಯುತ್,ನೀರಿನ ವೆಚ್ಚ, ಶೌಚಾಲಯ ಸ್ವಚ್ಛತೆ ವೆಚ್ಚ, ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ನೌಕರರ ಶವ ಸಂಸ್ಕಾರಕ್ಕಾಗಿ ಸಹಾಯಧನ ಹಾಗೂ ಕೊರೊನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿ ಮೃತಪಟ್ಟಿರುವವರಿಗೆ ಪರಿಹಾರ ಕಲ್ಪಿಸಲು 29.25 ಕೋಟಿ ರೂ.ಗಳ ಅನುದಾನ ಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಅನುದಾನವನ್ನು 2022-23ನೇ ಸಾಲಿನಲ್ಲಿ ಪ್ರೌಢಶಾಲೆ ಗಳ ಸಾದಿಲ್ವಾರು ವೆಚ್ಚಕ್ಕಾಗಿ ಒಟ್ಟಾರೆ 24.76 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ.ಇದರಲ್ಲಿಯೇ ಕೊರೊ ನಾದಿಂದ ಮೃತಪಟ್ಟ ಸರಕಾರಿ ನೌಕರರಿಗೂ ಪರಿಹಾರ ಧನ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.