ಸಾರಿಗೆ ನೌಕರರ ವೇತನ ಬಿಡುಗಡೆ ಬಿಡುಗಡೆ ಮಾಡಿ ನೌಕರರಿಗೆ ನೆರವಾದ ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು –

ಸಾರಿಗೆ ನೌಕರರಿಗೆ ಕಳೆದ ಆಗಸ್ಟ್ ತಿಂಗಳ ಬಾಕಿ ಸಂಬಳ ವನ್ನು ಪಾವತಿಸುವಂತೆ ಸರಕಾರವು ಅನುದಾನವನ್ನು ಬಿಡುಗಡೆ ಮಾಡಿದೆ. ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಸರಕಾರವು ಸಾರಿಗೆ ಇಲಾಖೆಯ 4 ನಿಗಮಗಳಿಗೆ 171 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

ಮೊದಲೇ ನಷ್ಟದಲ್ಲಿರುವ ಸಾರಿಗೆ ನಿಗಮಗಳಿಗೆ ಕಳೆದ ಒಂದು ವರ್ಷದಿಂದ ಕೊರೋನ ಲಾಕ್‍ಡೌನ್ ಭಾರೀ ಹೊಡೆತವನ್ನು ನೀಡಿದೆ. ಡೀಸಲ್ ಬೆಲೆ ಏರಿಕೆ ಮತ್ತು ಕನಿಷ್ಠ ಪ್ರಯಾಣಿಕರಿಲ್ಲದೆ ನಿಗಮಗಳಿಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಅಲ್ಲದೇ ಸಾರಿಗೆ ನಿಗಮಗಳಿಗೆ ಬರುತ್ತಿರುವ ಆದಾಯ ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ನೀಡಲು ಸಹ ಸಾಲುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ. ಇಡೀ ವರ್ಷದ ಸಾರಿಗೆ ನೌಕರರ ವೇತನ ನಿರ್ವಹಣೆಯನ್ನು ಸರಕಾರದ ಅನುದಾನದಲ್ಲಿ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.