ಕೋಲಾರ –
ಡಿಸೆಂಬರ್ ಅಂತ್ಯದೊಳಗೆ ಕೇಂದ್ರ ಸಮಾನ ವೇತನ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದ್ದು ನೂತನ ಪಿಂಚಣಿ ಯೋಜನೆ(ಎನ್‍ಪಿಎಸ್)ರದ್ಧತಿಗೂ ಸರ್ಕಾರ ಬದ್ಧವಾಗಿದ್ದು ಈ ಕಾರ್ಯ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಸರ್ಕಾರದ ಮುಖ್ಯ ಸಚೇತಕ ವೈ.ಎ. ನಾರಾ ಯಣಸ್ವಾಮಿ ತಿಳಿಸಿದರು.ಇಲ್ಲಿ ಕೋಲಾರ ದಲ್ಲಿ ಆರಂಭ ವಾದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು ‘ಬಿಜೆಪಿ ಸರ್ಕಾರವೇ 5 ಮತ್ತು 6ನೇ ವೇತನ ಆಯೋಗ ನೀಡಿದೆ.ನೌಕರರ ಹಿತ ಕಾಯುವ ಶಕ್ತಿ ಬಿಜೆಪಿಗೆ ಮಾತ್ರವಿದೆ. ನೌಕರರ ಬಹುದಿನದ ಬೇಡಿಕೆಯಾದ ಕೇಂದ್ರ ಸಮಾನ ವೇತನ ಜಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದ ಸರ್ಕಾರ ಸಿದ್ಧವಾಗಿದ್ದು ಈ ವರ್ಷದ ಅಂತ್ಯದೊಳಗೆ ಜಾರಿ ಶತಸಿದ್ಧ ಎಂದು ಘೋಷಿಸಿದರು.
ಇನ್ನೂ ನೌಕರರಿಗೆ ಮಾರಕವಾಗಿರುವ ಎನ್‍ಪಿಎಸ್ ರದ್ದುಗೊಳಿಸುವ ಕುರಿತು ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಅವರೇ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ.ಈ ಘೋಷಣೆ ಜಾರಿ ನಿಶ್ಚಿತ.ಈ ಕಾರ್ಯಕ್ಕಾಗಿ ಸಮಿತಿ ರಚಿಸ ಲಾಗಿದೆ.ಹಳೆ ಪಿಂಚಣಿ ಜಾರಿಯಾಗಲಿದೆ ಸರ್ಕಾರಿ ನೌಕರ ರಲ್ಲಿ ಶೇ 80ರಷ್ಟು ಶಿಕ್ಷಕರೇ ಇದ್ದಾರೆ.ಈ ನೌಕರರ ಶೇ 100 ರಷ್ಟು ಬೇಡಿಕೆ ಈಡೇರಿಸಿರುವುದು ಬಿಜೆಪಿ ಸರ್ಕಾರವೇ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೂಪಿಸುವ ಯೋಜನೆಗ ಳನ್ನು ಜನರಿಗೆ ತಲುಪಿಸುವ ನೌಕರರ ಹಿತ ರಕ್ಷಣೆಗೆ ನಾವು ಬದ್ಧ’ ಎಂದು ಭರವಸೆ ನೀಡಿದರು
‘