ಬೆಂಗಳೂರು –
ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ಶಾಲಾ,ಕಾಲೇಜು ಮತ್ತು ಮೌಲಾನಾ ಆಜಾದ್ ಉರ್ದು ಶಾಲೆಗಳ ತರಗತಿಗಳಲ್ಲಿ ಕೇಸರಿ ಶಾಲು-ಸ್ಕಾರ್ಫ್,ಹಿಜಾಬ್ ಧರಿಸುವಂತಿಲ್ಲ ಎಂದು ಅಲ್ಪಸಂ ಖ್ಯಾತ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.ಹೌದು ಹಿಜಾಬ್ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಅಲರ್ಟ್ ಆದ ಸರ್ಕಾರ ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸುವಂತೆ ಸೂಚನೆ ನೀಡಿದ್ದು ವಿದ್ಯಾರ್ಥಿಗಳು ತರಗತಿಗಳಲ್ಲಿ ಕೇಸರಿ ಶಾಲು-ಸ್ಕಾರ್ಫ್,ಹಿಜಾಬ್ ಧರಿಸುವಂತಿಲ್ಲ ಎಂದು ಉಲ್ಲೇಖ ವನ್ನು ಮಾಡಿ ಆದೇಶವನ್ನು ಹೊರಡಿಸಿದೆ

ಇನ್ನು ಈ ಮುಂಚೆ ಸರ್ಕಾರದಿಂದ ಮೌಖಿಕ ಆದೇಶ ನೀಡಲಾಗಿತ್ತು.ಆದ್ರೆ ಅದು ಪಾಲನೆಯಾಗದ ಹಿನ್ನೆಲೆಯಲ್ಲಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು ಕೋರ್ಟ್ ಮಧ್ಯಂತರ ಆದೇಶವನ್ನ ಜಾರಿಗೆ ತರಲು ಪ್ರಯತ್ನಿಸಿದೆ.