ಬೆಂಗಳೂರು –
ಹೌದು ಇಂದು ರಾಜ್ಯದ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಖುಷಿ ಪಡುವಂತಹ ಹೆಮ್ಮೆ ಪಡುವಂತಹ ಸುದಿನ ಎಂದರೆ ತಪ್ಪಾಗಲಾರದು. ಹೌದು ರಾಜ್ಯ ಸರ್ಕಾರ ಮಹತ್ವದವಾದ ಆದೇಶವೊಂದನ್ನು ಮಾಡಿದೆ.ಈವರೆಗೆ ಶಿಕ್ಷಕ ಸಂಯೋಜಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರಲಿಲ್ಲ ಸಧ್ಯ ಈ ಪದವೀಧೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಿಗೂ ಸಾಕಷ್ಟು ಪ್ರಮಾಣದಲ್ಲಿ ಅನುಕೂಲವಾಗಿದೆ.

ಹೀಗಾಗಿ ಇನ್ನೂ ಈ ಆದೇಶ ಹೊರ ಬೀಳಲು ಸಹಾಯ ಮಾಡಿದ ಸರ್ವರಿಗೂ ಅದರಲ್ಲೂ ವಿಶೇಷವಾಗಿ ಷಡಾಕ್ಷರಿ ಅವರಿಂದ ಹಿಡಿದು ಎಲ್ಲರಿಗೂ ರಾಜ್ಯದ ಸಮಸ್ತ ಪದವೀ ಧೆತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಶಿಕ್ಷಕರ ಸಂಘದವರು ಧನ್ಯವಾದಗಳನ್ನು ತಿಳಿಸಿದ್ದಾರೆ.ಸರ್ವರೂ ನಮ್ಮೊಂದಿಗಿದ್ದು ಹೋರಾಟದ ಪ್ರತಿ ಹೆಜ್ಞೆಯಲ್ಲಿಯೂ ಸಹ ಕೈ ಜೋಡಿಸಿ ಈ ಆದೇಶ ಹೊರಬೀಳಲು ಸಾಧ್ಯವಾಗಿದ್ದು ಈ ಎಲ್ಲಾ ಕೆಲಸ ಕಾರ್ಯಗಳನ್ನು ಹಗಲಿರುಳು ಎನ್ನದೆ ಬಿಡುವು ಇಲ್ಲದೆ ರೀತಿಯಲ್ಲಿ ಧಣಿವು ಅರಿಯದ ಕಾಯಕ ವನ್ನು ಮಾಡುತ್ತಾ ಸದಾ ಚಟುವಟಿಕೆಯಿಂದ ಓಡಾಡಿ ಈ ಆದೇಶವನ್ನು ಹೊರ ಬೀಳಲು ಶ್ರಮವಹಿಸಿದ ಸರ್ವರಿಗೂ ಧನ್ಯವಾದಗಳೆಂದು ಹೇಳಿದ್ದಾರೆ. ಕೆ.ಕೃಷ್ಣಪ್ಪನವರು.ರಾಜ್ಯ ಅಧ್ಯಕ್ಷರು.ಕ.ರಾ.ಸ.ಹಿರಿಯ ಹಾಗು ಪದವೀಧರೇತರ ಪ್ರಾ.ಶಾಲಾ ಮುಖ್ಯೋಪಾಧ್ಯಾಯರ ಸಂಘ.ಬೆಂಗಳೂರು ಆದ ಶ್ರೀಯುತರ ಪರವಾಗಿ.ಸಿ.ಜಯಪ್ಪ ಹೆಬ್ಬಳಗೆರೆ.ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗು ಭದ್ರಾವತಿ ತಾಲ್ಲೂಕು ಅಧ್ಯಕ್ಷರು.