ಏಳು KAS ಅಧಿಕಾರಿಗಳ ವರ್ಗಾವಣೆ – ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

Suddi Sante Desk

ಬೆಂಗಳೂರು –

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿ ಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಏಳು ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ವರ್ಗಾವಣೆಗೊಂಡ ಅಧಿಕಾರಿ ಗಳ ವಿವರ ಈ ಕೆಳಗಿನಂತಿದೆ. ರಾಜು ಮೊಗವೀರ ಕೆ. – ಅಪರ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿ ಕೊಡಗು ಜಿಲ್ಲೆ, ಡಾ.ರೂಪಶ್ರೀ ಎಸ್.- ಜಂಟಿ ಆಡಳಿತ ನಿದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಬೆಂಗಳೂರು, ವಿಜಯ್‍ಕುಮಾರ್ ಹೊನಕೇರಿ- ಪ್ರಾಂಶುಪಾಲರು ಜಿಲ್ಲಾ ತರಬೇತಿ ಸಂಸ್ಥೆ ಬೆಳಗಾವಿ, ಎಲ್.ಸಿ. ನಾಗರಾಜು-ಆಡಳಿತ ಅಧಿಕಾರಿ, ಸಕಾಲ ಮಿಷನ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ.

ಪ್ರಸನ್ನಕುಮಾರ್ ವಿ.ಕೆ.- ವಿಶೇಷ ಭೂಸ್ವಾಧೀನಾಧಿಕಾರಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಚಿತ್ರದುರ್ಗ ಜಿಲ್ಲೆ, ವೆ.ಎನ್.ಚಂದ್ರಮ್ಮ-ವಲಯ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ ಮೈಸೂರು, ಖಾಝಿ ನಫೀಸ-ಸಹಾಯಕ ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೆಂಗಳೂರು ಇಲ್ಲಿಗೆ ನಿಯೋಜನೆ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.