ಬೆಂಗಳೂರು –
ಶಿಕ್ಷಕರ ಬಹುದೊಡ್ಡ ಆತಂಕವನ್ನು ದೂರ ಮಾಡಿದ ರಾಜ್ಯ ಸರ್ಕಾರ – ವ್ಯಾಪಕ ವಿರೋಧ ದಿಂದ ಎಚ್ಚೇತ್ತುಕೊಂಡ ಇಲಾಖೆ…..ಶಿಕ್ಷಕರ ಧ್ವನಿಯಾಗಿ ಸುದ್ದಿ ಸಂತೆಯ ವರದಿಗೆ ಸಿಕ್ಕಿತು ಸ್ಪಂದನೆ ಹೌದು
ಎಸ್ ಎಸ್ ಎಲ್ ಸಿ ಯಲ್ಲಿ ಕಡಿಮೆ ಫಲಿತಾಂಶ ಬಂದ ಶಾಲೆಗಳ ಶಿಕ್ಷಕರ ಬಡ್ತಿಯನ್ನು ತಡೆಯಲಾ ಗುತ್ತದೆ ಎಂಬ ಆದೇಶಕ್ಕೆ ಸಾಕಷ್ಟು ವ್ಯಾಪಕ ವಿರೋಧ ಕಂಡು ಬಂದಿತು.ಈ ಒಂದು ಕುರಿತಂತೆ ರಾಜ್ಯದ ಶಿಕ್ಷಕರು ಕೂಡಾ ಆತಂಕದಲ್ಲಿದ್ದರು ರಾಜ್ಯದ ಶಿಕ್ಷಕರಿಗೆ ಆತಂಕ ಎಂಬ ಶೀರ್ಷಿಕೆ ಯಡಿಯಲ್ಲಿ ನಿಮ್ಮ ಸುದ್ದಿ ಸಂತೆ ವರದಿಯೊಂ ದನ್ನು ಪ್ರಕಟ ಮಾಡಿತ್ತು ಶಿಕ್ಷಕರು ಅಸಮಾ ಧಾನಗೊಂಡಿದ್ದು
ವ್ಯಾಪಕವಾದ ರೀತಿಯಲ್ಲಿ ಟೀಕೆಗಳು ಕೂಡಾ ಕೇಳಿ ಬರುತ್ತಿದ್ದು ಇದೇಲ್ಲದರ ಪರಿಣಾಮವಾಗಿ ಎಚ್ಚೇತ್ತುಕೊಂಡ ವಿಧಾನ ಪರಿಷತ್ ಸದಸ್ಯರು ಅವರಿವರನ್ನು ಭೇಟಿಯಾಗಿ ಈ ಒಂದು ಆದೇಶ ವನ್ನು ಕೂಡಲೇ ಹಿಂದೆ ಪಡೆಯುವಂತೆ ಒತ್ತಾಯ. ವನ್ನು ಮಾಡಿದ್ದರು.ಸಧ್ಯ ಈ ಒಂದು ಆದೇಶವನ್ನು ಹಿಂದೆ ಪಡೆಯಲಾಗಿದೆ. ಕಡಿಮೆ ಇರುವ ಅನುದಾ ನಿತ ಸರ್ಕಾರಿ ಶಾಲಾ ಶಿಕ್ಷಕರ ಒಂದು ವರ್ಷದ ಬಡ್ತಿ (ಇನ್ಕ್ರಿಮೆಂಟ್ )ಯನ್ನು ಕಡಿತಗೊಳಿಸಿ ಹೊರಡಿಸಲಾದ ಆದೇಶವನ್ನು ಹಿಂದೆ ತಗೆದು ಕೊಂಡಿದ್ದಾರೆ.
ಶಿಕ್ಷಕರ ವಲಯದಿಂದ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.ಪ್ರತಿಭಟನೆ ರೂಪುರೇಷೆಗಳ ಸಿದ್ದತೆ ಯೂ ನಡೆದಿತ್ತು.ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರಾದ ಶಶೀಲ್ ನಮೋಶಿ ಹಾಗೂ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಆಯುಕ್ತರಿಗೆ ಪತ್ರ ಬರೆದು ಆದೇಶ ವಾಪಸ್‌ಗೆ ಒತ್ತಾಯವನ್ನು ಮಾಡಿದ್ದಾರೆ.
ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕೆಂಭಾವಿ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳು ಸಚಿವ ದರ್ಶನಾಪುರ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಆದೇಶ ಕುರಿತು ಬೇಸರ ವ್ಯಕ್ತಪಡಿ ಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರಿಂದಲೂ ಅವರಿಗೆ ಆದೇಶ ಹಿಂಪಡೆಯುವಂತೆ ಸೂಚನೆ ಬಂದಿತ್ತು ಬಡ್ತಿ ತಡೆ ಆದೇಶ ಹಿಂಪಡೆಯುವಿಕೆ ಯನ್ನು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳ ಸೂಚನೆ ಹಾಗೂ ಶಿಕ್ಷಕರ ಮನವಿ ಮೇರೆಗೆ ಸಧ್ಯ ಹಿಂಪಡೆಯಲಾಗಿದೆ
ಶಿಕ್ಷಕರ ವಲಯವು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಡಂತಾಗಿದ್ದು ಇನ್ನೂ ರಾಜ್ಯದ ಸಮಸ್ತ ಶಿಕ್ಷಕರ ಧ್ವನಿಯಾಗಿರುವ ಸುದ್ದಿ ಸಂತೆ ವರದಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಸ್ಪಂದನೆ ಸಿಕ್ಕಂತಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..