ಬೆಂಗಳೂರು –
ದೇಶದಲ್ಲಿ NEP ನೀತಿಯನ್ನು ಸ್ವೀಕರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ,ಇದು ಅತ್ಯಂತ ಸಂತಸದ ವಿಚಾರವಾ ಗಿದ್ದು NEP ನೀತಿ ಮೂಲಕ ದೇಶವನ್ನು ಸೂಪರ್ ಜ್ಞಾನ ದೇಶವನ್ನಾಗಿ ಮಾಡಲು ಪ್ರಧಾನಿಗಳು ಪಣ ತೊಟ್ಟಿದ್ದಾರೆ. ಮೋದಿ ಸರ್ಕಾರ ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತುನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಸರ್ಕಾರ ದೇಶದಲ್ಲಿ 320ಕ್ಕೂ ಅಧಿಕ ವಿವಿಗಳ ಸ್ಥಾಪನೆ ಮಾಡಲಾ ಗಿದೆ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ನಗರದ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಧ್ಯಮದ ಕ್ಯಾಮೆರಾ ಮೆನ್ ಗಳು ಕ್ಯಾಮೆರಾ ಸೆಟ್ ಮಾಡಿ ಕೂತುಕೊಳ್ಳಿ ನನಗೆ ವಿದ್ಯಾರ್ಥಿಗಳ ಜೊತೆ ಮಾತಾಡಬೇಕು.ಇವತ್ತು ಅಕ್ಷಯ ದಿನದ ಪವಿತ್ರ ದಿನವಾಗಿದೆ.ದೇಶದಲ್ಲಿ ಕೃಷಿಕರು ಹಸುವಿನ ಪೂಜೆ ನಡರವೇರಿಸಿ ವರ್ಷವನ್ನು ಆರಂಭಿಸುತ್ತಾರೆ.ಇವತ್ತು ಬಸವಣ್ಣನವರ ಜಯಂತಿ ಕೂಡ ಇದೆ ಎಂದರು. ಲೋಕ ತಂತ್ರದ ಸ್ಪಷ್ಟ ಉದಾಹರಣೆಯನ್ನು ಅನುಭವ ಮಂಟಪದ ಮೂಲಕ ಬಸವಣ್ಣ ಬೋಧಿಸಿದ್ದಾರೆ.ಯುವಕರು ಏನು ಬೇಕಾದರೂ ಓದಲಿ,ಆದರೆ ಬಸವಣ್ಣ ನವರ ವಚನಗ ಳನ್ನು ಓದಬೇಕು.ಆಗ ಜೀವನದಲ್ಲಿ ಯಾವ ಸಮಸ್ಯೆ ಕೂಡ ಬರೋದಿಲ್ಲ.ಇದು ಅತ್ಯಂತ ಗೌರವದ ದಿನವಾಗಿದೆ. ಯಾಕೆಂದರೆ ನನ್ನ ಮುಂದೆ ಕರ್ನಾಟಕ ದೇಶದ ಭವಿಷ್ಯ ಕೂತಿದೆ.ಯುವಕರು ದೇಶದ ಭವಿಷ್ಯವಾಗಿದ್ದಾರೆ.ಮೊದಲು ಇದು ಸರ್ಕಾರಿ ವಿಜ್ಞಾನ ಕಾಲೇಜು ಇತ್ತು100 ವರ್ಷಗಳಿಂದ ಇಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ.ಇದೀಗ ನೃಪ ತುಂಗ ವಿವಿಯಾಗಿ ಅಧಿಕೃತವಾಗಿ ಉದ್ಘಾಟನೆ ಆಗಿದೆ ಎಂದರು.ಇನ್ನೂ ರಾಷ್ಟ್ರಕೂಟದ ಪ್ರಸಿದ್ಧ ರಾಜನಾದ ನೃಪತುಂಗನ ಹೆಸರನ್ನು ವಿವಿಗೆ ಇಟ್ಟಿರುವುದು ಹರ್ಷ ತಂದಿದೆ. ದೇಶಕ್ಕೆ ಸ್ವತಂತ್ರ ಸಿಕ್ಕಿದೆ, ಕಾಲ ಅನುಸಾರ ಪ್ರತಿಯೊಬ್ಬರು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ತೆರಿಗೆ ವಂಚಿಸೋಲ್ಲ, ಟ್ರಾಫಿಕ್ ರೂಲ್ಸ್ ಉಲ್ಲಂಘಿಸಲ್ಲ ಅನ್ನೊ ಸಂಕಲ್ಪ ದೇಶದ ಅಭಿವೃದ್ಧಿಗೆ ಕಾತಣವಾಗುತ್ತದೆ. ಉರಿ, ಪುಲ್ವಾಮದಲ್ಲಿ ಏರ್ ಸ್ಟ್ರೈಕ್ ಮಾಡಿಸಿ ದೇಶದ ತಂಟೆಗೆ ಬಂದರೆ ಏನಾಗುತ್ತೆ ಅನ್ನೊದನ್ನು ಮೋದಿ ಅವರು ತೋರಿ ಸಿಕೊಟ್ಟಿದ್ದಾರೆ ಎಂದು ಹೇಳಿದರು.