ಕೇಂದ್ರ ಸರ್ಕಾರದ ಮಾದರಿ ವೇತನ ಕುರಿತು ಷಡಕ್ಷಾರಿ ಅವರಿಂದ ಮಹತ್ವದ ಮಾಹಿತಿ ರಾಜ್ಯ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯಾಧ್ಯಕ್ಷರು…..

Suddi Sante Desk

ಶಿವಮೊಗ್ಗ –

ಬಜೆಟ್ ನಲ್ಲಿ ಯಾವುದೇ ಭರವಸೆ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ಗೊಂಡಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ನೆಮ್ಮದಿ ಸುದ್ದಿಯನ್ನು ನೀಡಿದ್ದಾರೆ ಹೌದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ ಅವರೊಂದಿಗೆ ಶಿವಮೊಗ್ಗ ದ ಶಿಕಾರಿಪುರ ದಲ್ಲಿ ಭೇಟಿಯಾಗಿ ಮಾತನಾಡಿದ ಅವರು ಈ ಒಂದು ವರ್ಷ ದಲ್ಲೇ ಈ ಒಂದು ಬೇಡಿಕೆ ಯನ್ನು ಈಡೇರಿಸುವ ಭರವಸೆ ಯನ್ನು ನೀಡಿದ್ದಾರೆಂದರು.

ನೂರಕ್ಕೆ ನೂರರಷ್ಟು ಕೇಂದ್ರ ಸರ್ಕಾರದ ಮಾದರಿ ವೇತನ ಭತ್ಯೆಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಕೊಡುವ ಸ್ಪಷ್ಟ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಸವ ರಾಜ ಬೊಮ್ಮಾಯಿ ಯವರು ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ರವರು ನೀಡಿರುವ ಹಿನ್ನಲೆಯಲ್ಲಿ ಯಾರು ಕೂಡಾ ಆತಂಕವನ್ನು ಪಡಬಾರದು ಎಂದರು.

ಶಿಕಾರಿಪುರದ ಬೃಹತ್ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ ಯವರು ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿ ಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ನೇತೃತ್ವದಲ್ಲಿ ಅಭಿನಂದನೆಗಳನ್ನು ಸಲ್ಲಿಸಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.