ಹುಬ್ಬಳ್ಳಿ –
ಶಿಕ್ಷಕರ ವರ್ಗಾವಣೆ ಯನ್ನು ಶೀಘ್ರವಾಗಿ ಮತ್ತು ಗ್ರಾಮೀಣ ಪ್ರದೇಶದ ಶಿಕ್ಷಕರನ್ನು ಗಮನದಲ್ಲಿಟ್ಟು ಕೊಂಡು ಹಾಗೇ ಇದರೊಂದಿಗೆ ಶೇಕಡಾ 25 ರಷ್ಟು ಹೊರತುಪಡಿಸಿ ವರ್ಗಾವಣೆ ಮಾಡಿ ಕೂಡಲೇ ಆರಂಭಿಸುವಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆ ಪ್ಪ ಅವರು Mlc ಪುಟ್ಟಣ್ಣಯ್ಯ ಜೊತೆ ಮಾತನಾಡಿ ಒತ್ತಾಯವನ್ನು ಮಾಡಿದರು.
ವಿಧಾನ ಪರಿಷತ್ ಸದಸ್ಯರೊಂದಿಗೆ ಮಾತನಾಡಿ ಶಿಕ್ಷಕರ ವರ್ಗಾವಣೆ ಕುರಿತು ಚರ್ಚಿಸಿದರು ಜೊತೆಗೆ ಸದ್ಯದಲ್ಲೇ ಶಿಕ್ಷಕರ ವರ್ಗಾವಣೆಯನ್ನು ಆನ್ ಲೈನ್ ಮುಖಾಂತರ ಆಗಲಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರು ಭರವಸೆ ನೀಡಿದರು. ಇದೇ ವೇಳೆ ತುಂಬಾ ದಿನಗಳ ನಂತರ ನಡೆಯುತ್ತಿರುವ ಈ ಒಂದು ವರ್ಗಾವಣೆಯಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯ ಹಾಗೇ ನಿಗದಿ ಮಾಡಿದ ಶೇಕಡಾ 25 ಬಿಟ್ಟು ವರ್ಗಾವಣೆ ಮಾಡುವಂತೆ ಒತ್ತಾಯವನ್ನು ಮಾಡಲಾಯಿತು.
ಈ ಮೂಲಕ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘಗಳ ನಿರಂತರ ಪ್ರಯತ್ನದಿಂದ ವರ್ಗಾವಣೆಗೆ ಹೊಸ ಬೆಳಕು ಮೂಡಲಿದೆ ಎಂದು ಶಿಕ್ಷಕರ ನಾಯಕರುಗಳಾದ ಅಶೋಕ ಸಜ್ಜನ ಹನು ಮಂತಪ್ಪ ಮೇಟಿ, ಕೆ ಬಿ ಕುರಹಟ್ಟಿ, ಲಕ್ಕಮ್ಮನವರ, ಮಲ್ಲಿಕಾರ್ಜುನ ಉಪ್ಪಿನ, ಎಸ್ ಎಫ್ ಪಾಟೀಲ, ಚಂದ್ರಶೇಖರ್ ಶೆಟ್ರು, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಜಿ ಟಿ ಲಕ್ಷ್ಮೀದೇವಮ್ಮ, ಎಂ ವಿ ಕುಸುಮ, ರಾಜಶ್ರೀ, ಪ್ರಭಾಕರ, ಶರಣಬಸವ ಬನ್ನಿಗೋಳ ಗೋವಿಂದ ಜುಜಾರೆ,ಕಿರಣ ರಘುಪತಿ, ಶಶಿಕುಮಾರ್ ಕೆಂಪೇಗೌಡ, ಹನುಮಂತಪ್ಪ ಬೂದಿಹಾಳ,ಡಾ ಲಕ್ಷ್ಮಣ ಕೆ ಎಂ ಸಿದ್ದೇಶ, ಎಂ ಡಿ ರಫೀಕ ಶಿವಾರೆಡ್ಡಿ, ಸಂಗಮೇಶ ಖನ್ನಿನಾಯ್ಕರ, ಎಂ ಎಂ ಚಿಕ್ಕೊಪ್ಪ ,ಬಿ ಎಸ್ ಮಂಜುನಾಥ ಕೆ ನಾಗರಾ ಜ, ಟಗರು ಪಂಡಿತ್,ಜೆ ಟಿ ಮಂಜುಳಾ, ಮುಂತಾದ ವರು ಈ ನಾಡಿನ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಶಿಕ್ಷಕರಿಗೆ ಭರವಸೆಯನ್ನು ನೀಡಿದರು.