ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ 3 ಲಕ್ಷ ನೌಕರರು – ಸಮ್ಮೇಳನ ಕುರಿತಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಹೌದು ಫೆಬ್ರುವರಿ 27 ರಂದು ಬೆಂಗಳೂ ರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇನದ ಕಾರ್ಯಕ್ರಮಕ್ಕೆ 3 ಲಕ್ಷ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಒಂದು ಸಮಾರಂಭ ನಡೆಯಲಿದ್ದು ಇದರಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ನೌಕರರು ಆಗಮಿಸುತ್ತಿದ್ದಾರೆ ಈ ಸಮ್ಮೇಳನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ.ಸಿಎಂ ಸಿದ್ದರಾ ಮಯ್ಯ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೌಕರ ರನ್ನು ಉದ್ದೇಶಿಸಿ ಮಾತಾಡಲಿದ್ದಾರೆ.
ಡಾ.ಸಿ.ಎನ್. ಮಂಜುನಾಥ್ ನೌಕರರ ಒತ್ತಡದ ಬಗ್ಗೆ ಉಪನ್ಯಾಸ ನೀಡಲಿದ್ದು, ಹಿರಿಯ ಅಧಿಕಾರಿ ಶಾಲಿನಿ ರಜನೀಶ್ ಆಡಳಿತ ಅಭಿವೃದ್ಧಿ ಬಗ್ಗೆ ಮಾತನಾಡಲಿದ್ದಾರೆ ಎಂದರು.ಸಮ್ಮೇಳನದಲ್ಲಿ ಸರ್ಕಾರದ ಎಲ್ಲಾ ಸಚಿವರು ಇರಲಿದ್ದಾರೆ. ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 3 ಗಂಟೆವರೆಗೆ ಇರಲಿದೆ. ಸಮ್ಮೇಳನಕ್ಕೆ ಬರುವ ನೌಕರರಿಂದ ಯಾವುದೇ ಶುಲ್ಕ ಪಡೆ ಯುತ್ತಿಲ್ಲ ಎಂದರು.
ಇನ್ನೂ ಈ ಒಂದು ಮಹಾ ಸಮ್ಮೇಳನದಲ್ಲಿ ರಾಜ್ಯದ ನೌಕರರ ಪ್ರಮುಖ ಮೂರು ಬೇಡಿಕೆ ಗಳ ಕುರಿತು ಸೂಕ್ತವಾಗಿ ಈಡೇರಿಸುವ ಭರವಸೆ ನಮಗೆ ಇದೆ ಆ ಒಂದು ನಿಟ್ಟಿನಲ್ಲಿ ಸರ್ಕಾರ ವು ಕೂಡಾ ಸ್ಪಂದಿಸಿದ್ದು ಅಂತಿಮ ವಾಗಿ ಕೊನೆಯ ಹಂತದಲ್ಲಿ ಮುಂದಿನ ಹೋರಾಟ ದ ಕುರಿತು ತೀರ್ಮಾನ ವನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..