ಬೆಂಗಳೂರು –
ಕೋವಿಡ್ ಕೆಲಸಕ್ಕೆ ನಿಯೋಜಿಸುತ್ತಿರುವ ಶಿಕ್ಷಕರಿಗೆ ಕೋವಿಡ್ ನಿರ್ಭಂದಕ್ಕಾಗಿ ಚುಚ್ಚುಮದ್ದು ವೈಧ್ಯಕೀ ಯ ಕಿಟ್ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ ಮಾಡಿದೆ.ಈ ಕುರಿ ತಂತೆ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀ ಲ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ಯ ಖಾತೆ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಪತ್ರವೊಂದನ್ನು ಬರೆದು ಒತ್ತಾಯವನ್ನು ಮಾಡಿ ದ್ದಾರೆ.

ಸಧ್ಯ ಶಿಕ್ಷಕರು ರಜೆಯನ್ನು ತಗೆದುಕೊಳ್ಳದೇ ಇತರೆ ಇಲಾಖೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹಗಲಿ ರುಳು ದುಡಿಯುತ್ತಿದ್ದಾರೆ. ಬಲಿಯಾಗುತ್ತಿದ್ದು ನೋವಿನ ಸಂಗತಿಯಾಗಿದೆ.ಹೀಗಾಗಿ ಯಾವುದೇ ಸೂಕ್ತ ಸೌಲಭ್ಯ ಸಿಗದೇ ಸಾಯುತ್ತಿದ್ದು ಕೂಡಲೇ ವೈಧ್ಯಕೀಯ ಕಿಟ್ ಹಾಗೂ ಇತರೆ ಸೌಲಭ್ಯಗಳನ್ನು ಶಿಕ್ಷಕರಿಗೆ ಒದಗಿಸುವಂತೆ ಸಂಘವು ಒತ್ತಾಯವನ್ನು ಮಾಡಿದೆ.

ಹಾಗೇ ಈ ಕುರಿತಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳ ತಾಲ್ಲೂಕು ಕೇಂದ್ರಗಳ ಅಧಿಕಾರಿಗಳಿಗೆ ಸೂಕ್ತ ವಾದ ನಿರ್ದೇಶವನ್ನು ನೀಡುವಂತೆ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ,ಪ್ರಧಾನ ಕಾರ್ಯದ ರ್ಶಿ ಚಂದ್ರಶೇಖರ ನುಗ್ಗಲಿ ಮತ್ತು ಸರ್ವ ಸದಸ್ಯರು ಒತ್ತಾಯವನ್ನು ಮಾಡಿದ್ದಾರೆ.