ಬೆಂಗಳೂರು –
ರಾಜ್ಯದಲ್ಲಿ ಶಾಲೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡಿರುವ ಶಿಕ್ಷಕರನ್ನು ಮರಳಿ ಮಾತೃ ಸಂಸ್ಥೆ ಗೆ ನಿಯೋಜನೆ ಮಾಡುವಂತೆ ಖಡಕ್ ಆದೇಶವನ್ನು ಇಲಾಖೆಯ ಆಯುಕ್ತರು ಮಾಡಿದ್ದರು.ಈ ಒಂದು ಆದೇಶ ಹೊರಡಿಸಿ ಇಷ್ಟು ದಿನ ಕಳೆದರು ಕೂಡಾ ಈವರೆಗೆ ಬಹುತೇಕ ಪ್ರಮಾಣದಲ್ಲಿ ಮರಳಿ ಬಾರದೇ ಇರೊದು ಬೆಳಕಿಗೆ ಬಂದಿದೆ.ಆಯುಕ್ತರು ವಿವರಣಾತ್ಮಕ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದ್ದರೂ ಶಿಕ್ಷಣ ಸಚಿವರು ಮುಂದಿನ ಆದೇಶದವರೆಗೆ ಯಥಾಸ್ಥಿತಿ ಮುಂದುವರಿಸು ವಂತೆ ಸೂಚಿಸಿದ್ದಾರೆ.
ಹೌದು ಅದಕ್ಕೆ ಮಾರುತ್ತರ ನೀಡಿರುವ ಆಯುಕ್ತರು ಸಂಯೋಜಕರ ನಿಯೋಜನೆ ರದ್ದುಪಡಿಸುವ ಅನಿವಾ ರ್ಯತೆ ಸ್ಪಷ್ಟಪಡಿಸಿದ್ದಾರೆ ಆದರೂ ಅನೇಕ ತಾಲೂಕು ಗಳಲ್ಲಿ ಸಂಯೋಜಕರು ತಮ್ಮ ಪ್ರಭಾವ ಬಳಸಿ ನಿಯೋ ಜನೆ ರದ್ದು ಆದೇಶಕ್ಕೆ ಬ್ರೇಕ್ ಹಾಕಿದ್ದಾರೆ.
ಇದರಿಂದ ಶಿಕ್ಷಣ ಇಲಾಖೆ ಆಯುಕ್ತರು ಮಾಡಿದ ಕಟ್ಟು ನಿಟ್ಟಿನ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಾಗಿದೆ. ಜೊತೆಗೆ ಅಧಿಕಾರಿ ಮತ್ತು ಶಿಕ್ಷಣ ಸಚಿವರ ನಡುವೆ ಹಗ್ಗ ಜಗ್ಗಾಟಕ್ಕೂ ಕಾರಣವಾಗಿದೆ ಹುದ್ದೆ ಖಾಲಿ,ನ್ಯಾಯಾಂಗ ನಿಂದನೆ, ಮಾತೃ ಇಲಾಖೆಯಲ್ಲಿ ಶಿಕ್ಷಕರ ಅವಶ್ಯಕತೆ, ಸಂಯೋಜಕರ ಹುದ್ದೆಗೆ ಸಿ.ಆರ್.ಪಿ./ಬಿ.ಆರ್.ಪಿ ಬಳಕೆ ಸೇರಿದಂತೆ ನಾನಾ ಕಾರಣಗಳನ್ನು ಉಲ್ಲೇಖಿಸಿ ಆಯುಕ್ತರು ಅನ್ಯ ಇಲಾಖೆಗೆ ನಿಯೋಜನೆಗೆ ತೆರಳಿದವರನ್ನು ವಾಪಸ್ ಕರೆಸಲು ಫರ್ವನು ಹೊರಡಿಸಿದ್ದರೂ ಪ್ರಯೋಜನವಾಗಿಲ್ಲ