This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯದಲ್ಲಿ ಯಶಶ್ವಿಯಾಯಿತು ಸೇವಾ ನಿರತ ಪದವೀಧರ ಶಿಕ್ಷಕರ ಹೋರಾಟ – ಇಲಾಖೆಯ ಅಧಿಕಾರಿಗಳಿಗೆ ಮನವಿ ಬೇಡಿಕೆ ಈಡೇರಿಕೆಗಳಿಗೆ ಒತ್ತಾಯ…..

WhatsApp Group Join Now
Telegram Group Join Now

ಬೆಂಗಳೂರು –

ಹಿಂಬಡ್ತಿ ವಿಚಾರದಲ್ಲಿ ರಾಜ್ಯವ್ಯಾಪಿ ಕರೆ ಸೇವಾ ನಿರತ ಪದವೀಧರ ಶಿಕ್ಷಕರು ಕರೆ ನೀಡಲಾಗಿದ್ದ ಹೋರಾಟಕ್ಕೆ ರಾಜ್ಯದ ತುಂಬೆಲ್ಲಾ ಅಭೂತಪೂರ್ವ ವಾದ ಬೆಂಬಲ ಕಂಡು ಬಂದಿದೆ.ರಾಜ್ಯ ಸಂಘಟನೆ ಕರೆ ನೀಡಲಾಗಿರುವ ಹೋರಾಟಕ್ಕೆ ರಾಜ್ಯದ ತುಂಬೆ ಲ್ಲಾ ಶಿಕ್ಷಕ ಬಂಧುಗಳು ಸಿಡಿದ್ದೆದ್ದು ಇಲಾಖೆಯ ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳ ಈಡೇರಿಕೆಗಳ ಕುರಿತಂತೆ ಮನವಿಯನ್ನು ನೀಡಿದರು.

ಧಾರವಾಡದಲ್ಲೂ ಪ್ರತಿಭಟನೆ

ರಾಜ್ಯವ್ಯಾಪಿ ಕರೆ ನೀಡಲಾಗಿರುವ ಹೋರಾಟಕ್ಕೆ ಧಾರವಾಡದಲ್ಲೂ ಬೆಂಬಲ ಕಂಡು ಬಂದಿತು.ಸಿ & ಆರ್ ತಿದ್ದುಪಡಿ ಕುರಿತು ಹಾಗೂ ಒಂದು ವೇಳೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಪದವೀ ಧರ ಶಿಕ್ಷಕರಿಂದ 6 ರಿಂದ 8 ನೇ ವರ್ಗಗಳ ಪಾಠ ಬೋಧನೆ ಬಹಿಷ್ಕಾರ ಹೋರಾಟ ಹಮ್ಮಿಕೊಳ್ಳು ತ್ತೇವೆ ಎಂಬ ಮನವಿಯನ್ನು ಜಿಲ್ಲಾ ಮಾನ್ಯ ಉಪ ನಿರ್ದೇಶಕರಾದ ಮೋಹನಕುಮಾರ್ ಹಂಚಾಟೆ ಅವರಿಗೆ ಪದವೀಧರ ಶಿಕ್ಷಕರು ಮನವಿ ಸಲ್ಲಿಸಿ ದರು.ಈ ಒಂದು ಸಂದರ್ಭದಲ್ಲಿ ಪದವೀಧರ ಶಿಕ್ಷಕರಾದ ಚಂದ್ರಶೇಖರ ತಿಗಡಿ ,ಅಯ್ಯಪ್ಪ ಮೊಕಾಶಿ, ಶ್ರೀಮತಿ ಶಕುಂತಲಾ ಅರಮನಿ, ಫಿರೋಜ್ ಗುಡೇನಕಟ್ಟಿ, ಶ್ರೀಕಾಂತ ಪವಾರ್, ಸಂತೋಷ್ ಸುತಾರ್, ವಿ ಎಂ ಮಡಿವಾಳರ್, ರಾಜು ಮಾಳವಾಡ, ಆರ್ ಎಸ್ ಹಿರೇಗೌಡರ್, ರುದ್ರೇಶ್ ಕುರ್ಲಿ, ಜಡ್ ಆಯ್ ಮಲ್ಲಿಕನವರ್, ಎನ್ ಆರ್ ಕಟ್ಟಿಮನಿ, ಪ್ರದೀಪ್ ಶೆಟ್ಟಿ, ಇಮ್ರಾನ್ ರಾಣೆಬೆನ್ನೂರ ಮುಂತಾದವರು ಹಾಜರಿದ್ದರು.

ಲಿಂಗಸುಗೂರು ನಲ್ಲಿ ಶರಣಬಸವ ಬನ್ನಿಗೋಳ ನೇತ್ರತ್ವದಲ್ಲಿ ಪ್ರತಿಭಟನೆ

ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಹಿಂಬಡ್ತಿ ಖಂಡಿಸಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಾಲಯ ಲಿಂಗಸೂಗೂರು ಇವರಿಗೆ ಕರ್ನಾ ಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣಬಸವ ಹೆಚ್ ಬನ್ನಿ ಗೋಳ ರವರು ಸರ್ಕಾರವು ನಮಗೆ ಸೂಕ್ತ ನ್ಯಾಯ ದೊರಕಿಸದಿದ್ದರೆ ಮುಂದಿನ ದಿನಗಳಲ್ಲಿ ತರಗತಿ ಬಹಿಷ್ಕಾರ ಮಾಡುವುದಾಗಿ ಮನವಿ ಸಲ್ಲಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರು ಈ ಹಿಂದೆ ನೇಮಕ ವಾದಾಗ ಒಂದರಿಂದ ಏಳನೇ ತರಗತಿ ಎಂದು ನೇಮಕಾತಿ ಮಾಡಿಕೊಂಡು ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ವಿವಿಧ ಪದವಿ ಹಾಗೂ ವೃತ್ತಿಪರ ಕೋರ್ಸುಗಳನ್ನು ಪಡೆದಿದ್ದಾಗಲೂ ಸೇವಾ ಹಿರಿತನ ಹಾಗೂ ಅನುಭ ವವನ್ನು ಪರಿಗಣಿಸದೆ ಸರ್ಕಾರವು c&r ನಿಯಮ 1) 19-05-2017 ಹಾಗೂ 2) 07-08-2017 ಪ್ರಕಾರ ರಾಜ್ಯದ ಅಂದಾಜು 80 ಸಾವಿರ ಪದವೀಧರ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದು ತುಂಬಾ ಖೇದಕರ ಸಂಗತಿ.ಅಲ್ಲದೇ 2005 ರಿಂದ ಇಲ್ಲಿಯವರೆಗೂ 1 ರಿಂದ 7,8 ನೇ ತರಗತಿಗಳನ್ನು ಬೋಧಿಸುತ್ತಾ ಬಂದಿದ್ದರೂ ಯಾವುದೇ ಹೆಚ್ಚಿನ ಭತ್ಯೆ ಹಾಗೂ ಬಡ್ತಿಗಳನ್ನು ನೀಡದೇ ಸರಕಾರವು ಶಿಕ್ಷಕರಿಗೆ ತುಂಬಾ ಅನ್ಯಾಯವನ್ನು ಮಾಡಿರುತ್ತದೆ ಹಾಗಾಗಿ ಈಗಿರುವ ವೃಂದಬಲ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಸೇವಾ ನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಸೇವಾ ಹಿರಿತನ ಹಾಗೂ ಪದವಿ ಗನುಗುಣವಾಗಿ 6 ರಿಂದ 8ಕ್ಕೆ ವಿಲಿನ ಮಾಡಿ ಸೂಕ್ತ ನ್ಯಾಯವನ್ನು ದೊರಕಿಸಿ ಕೊಡಬೇಕು ಹಾಗೂ ಬಿ.ಈಡಿ ಪದವಿ ಪಡೆದ ಶಿಕ್ಷಕರಿಗೆ ಪ್ರೌಢಶಾಲಾ ಗ್ರೇಡ್ -೨ ಹುದ್ದೆಗಳಿಗೆ ಬಡ್ತಿ ನೀಡಬೇಕೆಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿದರು.ಇಲಾಖೆ ಹಾಗೂ ಸರ್ಕಾರದ ವರು ಸೇವಾನಿರತ ಪದವೀಧರ ಶಿಕ್ಷಕರಿಗೆ ಯಾವು ದೇ ಸ್ಥಾನಮಾನ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಸಾಮೂಹಿಕವಾಗಿ 6,7,8 ನೇ ತರಗತಿ ಯನ್ನು ಪಾಠಬೋಧನೆ ತರಗತಿ ಬಹಿಷ್ಕಾರ ಮಾಡುವುದರಿಂದಿಗೆ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ ತಾಲೂಕಿನ ಪದವೀ ಧರ ಶಿಕ್ಷಕರ ವತಿಯಿಂದ ಇಲಾಖೆಯ ಗಮನಕ್ಕೆ ತಂದರು. ಅಧ್ಯಕ್ಷರಾದ ಶರಣಬಸವ ಬನ್ನಿಗೋಳ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಣ್ಣ .ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾ ಧ್ಯಕ್ಷರಾದ ಹನುಮಂತಪ್ಪ ಮೇಟಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಶರಣಬಸವ ಕೆ ಗುಡದಿನ್ನಿ ಮುಖ್ಯ ಗುರುಗಳ ತಾಲೂಕಾಧ್ಯಕ್ಷರಾದ ಅಮರಪ್ಪ ಸಾಲಿ. ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಮಹಮ್ಮದ್ ಅಜಮ್ . ಪ ಜಾತಿ/ ಪ ಪಂಗಡ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಹನಮೇಶ ಗೋನವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬಸವರಾಜ ಮ್ಯಾಗೇರಿ ಪದವೀ ಧರ ಸಂಘದ ಪದಾಧಿಕಾರಿಗಳು ಹಾಗೂ ಪದವಿಧರ ಶಿಕ್ಷಕರುಗಳಾದ ಬಾಬು ಅಮರಪ್ಪ ಹೆಚ್.ಎಮ್. ರಾಜೇಂದ್ರ ಬಾಬು ರಾಜೇಂದ್ರ,ಕಾಳಪ್ಪ ಬಡಿಗೇರ್. ಪ್ರವೀಣ್ ಹುನಗುಂದ ಮಹಮ್ಮದ್ ಯೂನಿಸ್ . ಬಸವಲಿಂಗಪ್ಪ .ಮಹೇಶ್ ಕುಮಾರ್ . ಮಾನಪ್ಪ . ಪರಮಪ್ಪ.ಮಲ್ಲಪ್ಪ ವಗ್ಗರ್ .ಸುರೇಶ್ . ನಾಗಭೂ ಷಣ .ಕಲ್ಲಪ್ಪ ಮಲ್ಲಿಕಾರ್ಜುನ್ ವೀರಾಪುರ.ಶ್ರೀಮತಿ ಕಾವೇರಿ ಬಾಯಿ . ಲಚಮಣ್ಣ .ಮದನಿ ಭಾದಶಹ. ಇನ್ನೂ ಮುಂತಾದ ಪದಾಧಿಕಾರಿಗಳು ಮನವಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಶ್ವಿಗೊಳಿಸಿ ದರು.

ವಿಜಯಪುರ ಪ್ರತಿಭಟನೆ

ವಿಜಯಪುರ ಜಿಲ್ಲೆಯಲ್ಲೂ ಪದವಿಧರ ಶಿಕ್ಷಕರ ಸಂಘದ ಅದ್ಯಕ್ಷರು ಉಪಾದ್ಯಕ್ಷರು ಹಾಗು ನೌಕರ ಸಂಘದ ಅದ್ಯಕ್ಷರು ಉಪಾದ್ಯಕ್ಷರು ಪದಾದಿಕಾರಿ ಗಳು ಗ್ರಾಮೀಣ ತಾಲೂಕು ಘಟಕದ ಶಿಕ್ಷಕ ಸಂಘದ ಅದ್ಯಕ್ಷರು ಆರ್ .ಎಂ ಮೆತ್ರಿ .ತಿಕೋಟಾ ಶಿಕ್ಷಕರ ಸಂಘದ ಅದ್ಯಕ್ಷರು, ಜಿತ್ತಿ. ಚನಬಸುಗೋಳ.ಬ ಬಲೇಶ್ವರ ತಾಲೂಕಿನ ಶಿಕ್ಷಕರ ಸಂಘದ ಅದ್ಯಕ್ಷರಾದ ರವೀಂದ್ರ ಉಗಾರ , ಇಂಡಿ . ಮಲ್ಲು ಟಕ್ಕಳಕಿ. ನಿಜು ಮೇಲಿನಕೇರಿ .ಈರಣ್ಣ ಹೊಸಟ್ಟಿ .ಪ್ರವೀಣ ಪತ್ತಾರ ಗಗನಮಲಿ, ರಾಜೇಂದ್ರ, ಬಡಿಗೇರ ಉಳಿದ ಎಲ್ಲಾ ಶಿಕ್ಷಕರು C&R ತಿದ್ದುಪಡಿ ಗಾಗಿ ನಮ್ಮ ನ್ಯಾಯ ಸಮ್ಮತ ಬೇಡಿಕೆಗಾಗಿ ಹೋರಾಟಕ್ಕೆ ಹಾಗು 6-8ನೇ ತರಗತಿ ಬೋಧನೆ ಬಹಿಸ್ಕರಿಸಲು ನಿರ್ಣಯವನ್ನು ತಗೆದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನವಿ ನೀಡಿದರು.

ಒಟ್ಟಾರೆ ರಾಜ್ಯದ ತುಂಬೆಲ್ಲಾ ಪದವೀಧರ ಶಿಕ್ಷಕರು ತಮ್ಮ ಹಕ್ಕಿಗಾಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿದರು.


Google News

 

 

WhatsApp Group Join Now
Telegram Group Join Now
Suddi Sante Desk