ಹಗಲು ರಾತ್ರಿ ಚಳಿ ಎನ್ನದೇ OPS ಗಾಗಿ 5ನೇ ದಿನಕ್ಕೆ ಕಾಲಿಟ್ಟು NPS ನೌಕರರ ಹೋರಾಟ – ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದೆ ಹೆಚ್ಚಾಗುತ್ತಿದೆ ಹೋರಾಟಗಾರರ ಸಂಖ್ಯೆ

Suddi Sante Desk
ಹಗಲು ರಾತ್ರಿ ಚಳಿ ಎನ್ನದೇ OPS ಗಾಗಿ 5ನೇ ದಿನಕ್ಕೆ ಕಾಲಿಟ್ಟು NPS ನೌಕರರ ಹೋರಾಟ – ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದೆ ಹೆಚ್ಚಾಗುತ್ತಿದೆ ಹೋರಾಟಗಾರರ ಸಂಖ್ಯೆ

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಮರಣ ಶಾಸನ ವಾಗಿರುವ ಹೊಸ ಪಿಂಚಣಿ ವ್ಯವಸ್ಥೆ ವಿರುದ್ದ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಡು ಇಲ್ಲವೇ ಮಡಿ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದೆ ಪಿಂಚಣಿ ವ್ಯವಸ್ಥೆಗೆ ತಾರ್ಕಿಕ ಅಂತ್ಯವನ್ನು ಹಾಡ ಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಡಿಸೆಂಬರ್ 19 ರಿಂದ ಪ್ರೀಡಂ ಪಾರ್ಕ್ ನಲ್ಲಿ ಆರಂಭಗೊಂಡಿರುವ ಈ ಒಂದು ಹೋರಾಟವು ಮುಂದುವರೆದಿದೆ.

ಶಾಂತರಾಮ್ ಅವರ ನೇತ್ರತ್ವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಎನ್ ಪಿಎಸ್ ನೌಕರರು ಈ ಒಂದು ಹೋರಾಟ ದಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನವನ್ನು ಮಾಡು ತ್ತಿದ್ದಾರೆ.ಇನ್ನೂ ಹಗಲು ರಾತ್ರಿ ಎನ್ನದೇ ಮೈ ನಡಗುವ ಚಳಿ ಎನ್ನದೇ ಸರ್ಕಾರಿ ನೌಕರರು ಈ ಒಂದು ಹೋರಾಟವನ್ನು ಮಾಡುತ್ತಿದ್ದು ಈವರೆಗೆ ರಾಜ್ಯ ಸರ್ಕಾರದ ಪರವಾಗಿ ಯಾರೊಬ್ಬರು ಬಂದು ಸಮಸ್ಯೆಯನ್ನು ಆಲಿಸಿಲ್ಲ ಸ್ಪಂದಿಸಿಲ್ಲ ಹೀಗಾಗಿ ನೌಕರರ ಹೋರಾಟದ ಕಿಚ್ಚು ಹೆಚ್ಚಾಗು ತ್ತಿದ್ದು ಪ್ರತಿಭಟನೆಗೆ ಸಾಗರೋಪಾದಿಯಲ್ಲಿ ನೌಕರರು ಹರಿದು ಬರುತ್ತಿದ್ದಾರೆ.

 

 

ಪುಟ್ಟ ಪುಟ್ಟ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ನೌಕರರು ಅದರಲ್ಲೂ ಮಹಿಳಾ ನೌಕರರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡುತ್ತಾ ಬೇಡಿಕೆಗ ಳಿಗಾಗಿ ಹೋರಾಟ ಮಾಡುತ್ತಿದ್ದಾರೆ.ಇನ್ನಾದರೂ ಸರ್ಕಾರ ಈ ಕೂಡಲೇ ಹೋರಾಟದ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಕೆಗೆ ಕುರಿತಂತೆ ಹೋರಾಟಗಾರರೊಂದಿಗೆ ಮಾತನಾಡಿ ಸ್ಪಂದಿ ಸೊದು ಅವಶ್ಯಕವಿದೆ ಇಲ್ಲವಾದರೆ ಹೋರಾಟದ ಕಾವು ಹೆಚ್ಚಾಗಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.