ಸರ್ಕಾರಿ ನೌಕರರ ಹೋರಾಟಕ್ಕೆ ಬೆಂಬಲ ನೀಡಿದ ರಾಜ್ಯ ಘಟಕದ ಕಾರ್ಯಾಧ್ಯಕ್ಷರು – ಭರವಸೆಯ ಹಿನ್ನಲೆಯಲ್ಲಿ ಅಂತ್ಯಗೊಂಡಿತು ಸರ್ಕಾರಿ ನೌಕರರ ಹೋರಾಟ…..

Suddi Sante Desk
ಸರ್ಕಾರಿ ನೌಕರರ ಹೋರಾಟಕ್ಕೆ ಬೆಂಬಲ ನೀಡಿದ ರಾಜ್ಯ ಘಟಕದ ಕಾರ್ಯಾಧ್ಯಕ್ಷರು – ಭರವಸೆಯ ಹಿನ್ನಲೆಯಲ್ಲಿ ಅಂತ್ಯಗೊಂಡಿತು ಸರ್ಕಾರಿ ನೌಕರರ ಹೋರಾಟ…..

ಧಾರವಾಡ

ಸರ್ಕಾರಿ ನೌಕರರ ಹೋರಾಟಕ್ಕೆ ಬೆಂಬಲ ನೀಡಿದ ರಾಜ್ಯ ಘಟಕದ ಕಾರ್ಯಾಧ್ಯಕ್ಷರು – ಭರವಸೆಯ ಹಿನ್ನಲೆಯಲ್ಲಿ ಅಂತ್ಯಗೊಂಡಿತು ಸರ್ಕಾರಿ ನೌಕರರ ಹೋರಾಟ ಹೌದು ಆರ್ ಟಿಐ ಕಾರ್ಯ ಕರ್ತ ಕಿರುಕುಳದಿಂದ ಬೇಸತ್ತು ಪಿಡಿಓ ರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಕಿರುಕುಳವನ್ನು ನೀಡಿದವರನ್ನು ಬಂಧಿಸುವಂತೆ ಒತ್ತಾಯಿಸಿ ಧಾರವಾಡದಲ್ಲಿ ಪಿಡಿಓ ನೌಕರರು ನಡೆಸುತ್ತಿರುವ ಹೋರಾಟ ಪ್ರತಿಭಟನೆ ಮುಂದುವರಿದೆದೆ.

ಇನ್ನೂ ಈ ಒಂದು ಹೋರಾಟಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನೆಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಯವರು ಬೆಂಬಲವನ್ನು ನೀಡಿದ್ದಾರೆ.ಹೌದು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಈ ಒಂದು ಹೋರಾಟ ನಡೆಯುತ್ತಿದ್ದು ಪಿಡಿಓ ನೌಕರರ ಹೋರಾಟಕ್ಕೆ ಬೆಂಬಲವನ್ನು ನೀಡಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರಿನ ಕಾರ್ಯಾಧ್ಯಕ್ಷರು ಮತ್ತು ಬಾಗಲಕೋಟ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಯವರು ಮತ್ತು ಧಾರವಾಡ ಜಿಲ್ಲಾಧ್ಯ ಕ್ಷರಾದ ಎಸ್.ಎಫ್.ಸಿದ್ದನಗೌಡರ ರವರ ಬೆಂಬಲದೊಂದಿಗೆ ಪಿ.ಡಿ.ಓ. ನೌಕರರ ಸಂಘ ಧಾರವಾಡ ಮತ್ತು RDPR ಇಲಾಖೆಯ ವೃಂದ ಸಂಘಗಳ ಧಾರವಾಡ ರವರ ವತಿಯಿಂದ ನಡೆಯುತ್ತಿರುವ ಮುಷ್ಕರಕ್ಕೆ ಬೆಂಬಲವನ್ನು ನೀಡಿದರು.

ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಯವರ ಮಾರ್ಗದರ್ಶನದಂತೆ ಕಾರ್ಯಾಧ್ಯಕ್ಷರು ಮತ್ತು ಧಾರವಾಡ ಜಿಲ್ಲಾಧ್ಯಕ್ಷರು ಪಾಲ್ಗೊಂಡು ಬೆಂಬಲ ವನ್ನು ನೀಡಿದರು.ಸಂಘದ ಸಂಪೂರ್ಣವಾದ ಬೆಂಬಲವನ್ನು ಘೋಷಣೆ ಮಾಡಿದರು. ಪಂಚಾ ಯತ್ ರಾಜ್ಯ ಇಲಾಖೆಯ ಆಯುಕ್ತರು ಮತ್ತು ಧಾರವಾಡ ಸಿ.ಇ.ಓ. ರವರು ಮುಷ್ಕರದ ಸ್ಥಳಕ್ಕೆ ಆಗಮಿಸಿ ಅಹಮಾಲುಗಳನ್ನು ಆಲಿಸಿ ಮನವಿ ಯನ್ನು ಸ್ವೀಕರಿಸಿದರು.ಬೇಡಿಕೆಗಳನ್ನು ಈಡೇ ರಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದರು.

ಇದೇ ವೇಳೆ ಮುಷ್ಕರವನ್ನು ಕೈಬಿಡಲು ನಿರ್ಧ ರಿಸಲಾಯಿತು.ಇನ್ನೂ ಈ ಒಂದು ಸದರಿ ಮುಷ್ಕರ ಯಶಸ್ವಿಯಾಗಲು ಸ್ಪಂದಿಸಿದ ಜಿಲ್ಲಾ ಸಂಘದ ಎಲ್ಲಾ ಸದಸ್ಯರಿಗು,ಪದಾಧಿಕಾರಿಗಳು,ಜಿಲ್ಲೆಯ ಎಲ್ಲಾ ಇಲಾಖೆಯ ವೃಂದ ಸಂಘದ ಪದಾಧಿಕಾ ರಿಗಳಿಗೂ,ಜಿಲ್ಲೆಯ ಸಮಸ್ತ ನೌಕರ ಬಂಧುಗಳಿಗು ಜಿಲ್ಲಾ ಸಂಘದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಸಂಘಟನೆಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.