ಕಲಬುರಗಿ –
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಮನೆಯ ಮುಂದೆ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದವರು ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ.ಹೌದು ಕೆಲವೊಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಲಾ ಒಕ್ಕೂಟದ ವರು ಅಕ್ಟೋಬರ್ 21 ರಿಂದ ಮನೆಯ ಮುಂದೆ ಧರಣಿ ಮಾಡಲು ತೀರ್ಮಾನವನ್ನು ತಗೆದುಕೊಂಡಿದ್ದಾರೆ
ಹೌದು ಬೀದರ್ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಅಕ್ಟೋಬರ್ 21/10/2021 ರಿಂದ ವಿಧಾನ ಪರಿಷತ್ ಸದಸ್ಯರುಗಳ ಮನೆಯ ಮುಂದೆ ಈ ಒಂದು ಹೋರಾಟ ಪ್ರಾರಂಭವಾಗಲಿದೆ.ಅನಿರ್ಧಷ್ಟ ಅವಧಿ ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲು ಗೂಗಲ್ ಮೀಟಿಂಗ್ ನಲ್ಲಿ ಎಲ್ಲಾ ಶಾಲೆಗಳ ಮುಖಂಡರು ಭಾಗವಹಿಸಿ ಅಭಿಪ್ರಾಯ ಹೇಳಿದ್ದಾರೆ
ಅಂತಿಮವಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದ್ದು ಹೀಗಾಗಿ ಗುರುನಾಥರಡ್ಡಿ ಚಿಂತಾಕಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೀದರ್ ಇವರು ಹೋರಾಟಕ್ಕೆ ಬೆಂಬಲ ವನ್ನು ನೀಡುವಂತೆ ಮನವಿ ಮಾಡಿದ್ದಾರೆ