ಚಾಮರಾಜನಗರ –
ಸರ್ಕಾರಿ ಶಾಲೆಯ ಅಡುಗೆ ಸಹಾಯಕಿಯೊಬ್ಬಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳದೆ ಹಠ ಹಿಡಿದ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ.
ಹೌದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂ ಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಿರಿಜನರೇ ಹೆಚ್ಚು ವಾಸಿಸುವ ಕಗ್ಗಲಿ ಗುಂದಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದೆ ಹಠ ಹಿಡಿದ ಘಟನೆ ನಡೆದಿದೆ.
ಕಗ್ಗಲಿಗುಂದಿ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹಲವು ತಾಸುಗಳ ಕಾಲ ಪಟ್ಟು ಹಿಡಿದಿದ್ದರು.
ಆಕೆಯ ಮನೆಯ ಬಳಿ ತಾಲ್ಲೂಕು ಕೋವಿಡ್ ನೋಡಲ್ ಆಫೀಸರ್ ಹಾಗೂ ಆರೋಗ್ಯ ಅಧಿಕಾರಿ ನಿಂಬೇಷ್ ಇಒ ಶ್ರೀನಿವಾಸ್ ಪಿಡಿಒ ಮಲ್ಲೇಶ್ ನೇತ್ರತ್ವದಲ್ಲಿ ಅಧಿಕಾರಿಗಳ ತಂಡ ತೆರಳಿ ಮನವೊ ಲಿಕೆ ನಂತ್ರ ಅಡುಗೆ ಸಹಾಯಕಿ ಲಸಿಕೆ ಹಾಕಿಸಿಕೊಂ ಡಿದ್ದಾರೆ.