ತಮಿಳುನಾಡು –
ಶಾಲೆಯ ಮೂವರು ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ನಿಂದಿಸಿದ್ದಲ್ಲದೇ ಹಲ್ಲೆಗೆ ಯತ್ನಿಸಿದ ಘಟನೆ ತಮಿಳುನಾಡಿ ನಲ್ಲಿ ನಡೆದಿದೆ.ಹೌದು ಈ ಒಂದು ಘಟನೆಯಿಂದಾಗಿ ಸಧ್ಯ ಹಲ್ಲೆ ಮಾಡಿದ ಮೂವರು ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಲಾಗಿದೆ.ತಮಿಳುನಾಡಿನ ಮದನೂರ್ ಸರ್ಕಾರಿ ಶಾಲೆಯಲ್ಲಿ ನಡೆದಿದೆ.ಇದೀಗ ಸೋಶಿಯಲ್ ಮೀಡಿಯಾ ದಲ್ಲಿ ಅದರ ವಿಡಿಯೋ ಕೂಡ ವೈರಲ್ ಆಗಿದೆ. ಸಸ್ಯಶಾಸ್ತ್ರ ದ ಶಿಕ್ಷಕ ಸಂಜಯ್ ಗಾಂಧಿ ಅವರು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ದಾಖಲೆ ಪುಸ್ತಕಗಳನ್ನು ಸಲ್ಲಿಸು ವಂತೆ ಹೇಳಿದರು. ಈ ವೇಳೆ ತರಗತಿಯ ವಿದ್ಯಾರ್ಥಿಯಾದ ಮಾರಿ ಎಂಬ ಹುಡುಗ ನಿದ್ರಿಸುತ್ತಿರುವುದನ್ನು ಕಂಡು ಶಿಕ್ಷಕನು ಪ್ರಶ್ನಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಯು ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ್ದಾನೆ.ಅಷ್ಟೇ ಅಲ್ಲದೇ ಅವರು ಶಿಕ್ಷಕನ ಮೇಲೆ ಹಲ್ಲೆ ನಡೆಸಲು ಕೈಗಳನ್ನು ಮೇಲಕ್ಕೆತ್ತಿರುವ ದೃಶ್ಯ ಕಂಡುಬಂದಿದೆ ಹೀಗಾಗಿ ಇದನ್ನು ಗಂಭೀರವಾಗಿ ತಗೆದು ಕೊಂಡು ಸಧ್ಯ ವಿದ್ಯಾರ್ಥಿಗಳನ್ನು ಕಾಲೇಜ್ ನಿಂದ ಅಮಾ ನತು ಮಾಡಲಾಗಿದೆ.ಘಟನೆ ಬೆಳಕಿಗೆ ಬಂದ ಕೂಡಲೇ ಕಂದಾಯ ಅಧಿಕಾರಿಗಳು,ಆರ್‌ಡಿಒ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.ಶಿಕ್ಷಕ ಮತ್ತು ವಿದ್ಯಾ ರ್ಥಿಗಳನ್ನು ಪ್ರಶ್ನಿಸಿದ ನಂತರ ವೀಡಿಯೊದಲ್ಲಿ ಕಂಡುಬ ರುವ ಇಬ್ಬರು ವಿದ್ಯಾರ್ಥಿಗಳು ಮತ್ತು ಘಟನೆಯಲ್ಲಿ ಸಹಚರ ಎಂದು ಪರಿಗಣಿಸಲಾದ ಮೂರನೇ ವಿದ್ಯಾರ್ಥಿ ಯನ್ನು ಅಮಾನತುಗೊಳಿಸಲಾಗಿದೆ.