ಪರೀಕ್ಷೆ ಯ ಭವಿಷ್ಯ ಇಂದು ನಿರ್ಧಾರ – ತೀರ್ಪು ಪ್ರಕಟಿಸಲಿದೆ ಸುಪ್ರೀಂ ಕೋರ್ಟ್…..

Suddi Sante Desk

ದೆಹಲಿ –

ಎರಡನೇ‌ ಅಲೆ‌ಯ ಹೊಡೆತಕ್ಕೆ ಸೋಂಕಿನ ಸ್ಫೋಟ ದ ನಡುವೆ ಶಿಕ್ಷಣ ಕ್ಷೇತ್ರ ನಲುಗಿ ಹೋಗಿದೆ. ಈ ನಡು ವೆ PUC ಎರಡನೇ ವರ್ಷದ ಪರೀಕ್ಷೆ ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ತೀರ್ಮಾನ ಕೈಗೊಂಡಿ ತ್ತು.ಆದರೆ ಇದನ್ನು ಪ್ರಶ್ನಿಸಿ ಕೇಂದ್ರ ಶಿಕ್ಷಣ ಇಲಾಖೆ ಯ ಕ್ರಮದ ವಿರುದ್ಧ ವಕೀಲರಾದ ಮಮತಾ ಶರ್ಮಾ ಎಂಬುವವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಈ ಒಂದು ಅರ್ಜಿಯ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಇವತ್ತು ವಿಚಾರಣೆ ನಡೆಸಲಿದೆ.

ಇಂದು ಈ ಕುರಿತು ವಿಚಾರಣೆ ನಡೆಯಲಿದ್ದು 12ನೇ ತರಗತಿಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪರೀಕ್ಷೆ ನಡೆಯಬೇಕೋ‌,ಬೇಡವೋ ಎಂಬುದನ್ನು ನಿರ್ಧರಿ ಸಲಿದೆ.ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ಪೀಠ ಕಳೆದ ಶುಕ್ರವಾರ ಅರ್ಜಿ ಸಂಬಂಧ ವಿಚಾರಣೆ ನಡೆಸಿ ಪ್ರಕರಣ ಮುಂದೂಡಿತ್ತು.ಈ ವೇಳೆ ಸಿಬಿಎಸ್‌ಇ ಸಲಹೆಗಾರರ ಮುಂಗಡ ಪ್ರತಿ ಯನ್ನು ಒದಗಿಸುವಂತೆ ನ್ಯಾಯಪೀಠ ಸೂಚಿಸಿತ್ತು. ಹೀಗಾಗಿ ಸುಪ್ರೀಂಕೋರ್ಟ ಇಂದು ವಿಚಾರಣೆ ನಡೆಸಲಿದ್ದು, ಮಧ್ಯಾಹ್ನದ ಹೊತ್ತಿಗೆ ಅಂತಿಮ ಆದೇಶ ಹೊರಬೀಳೋ ಸಾಧ್ಯತೆಯಿದೆ.

ಕಳೆದ ವಾರ ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ಕೇಂದ್ರ ಉನ್ನತಮಟ್ಟದ ಸಭೆ ಸೇರಿತ್ತು.ಕೇಂದ್ರ ರಕ್ಷ ಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ಸಭೆಯಲ್ಲಿ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಭಾಗಿಯಾಗಿದ್ರು.ಎಲ್ಲಾ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ತೆಗದುಕೊಳ್ಳ ಲಾಗಿತ್ತು. ಆದ್ರೆ, ಇವತ್ತು ಸುಪ್ರೀಂಕೋರ್ಟ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ರೆ ನಾಳೆ ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವಾಲ ಯ ರಿಲೀಸ್ ಮಾಡುವ ಸಾಧ್ಯತೆ ಇದೆ.ಒಟ್ಟಾರೆ PUC ವಿದ್ಯಾರ್ಥಿಗಳ ಪರೀಕ್ಷೆ ಭವಿಷ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಇಂದು ಪಿಯುಸಿ ಪರೀಕ್ಷೆ ಬಗ್ಗೆ ಅಂತಿಮ‌ ನಿರ್ಧಾರ ಹೊರಬೀಳಲಿದೆ.ಇತ್ತ ಏನಾಗಲಿದೆ ಎಂಬ ದೊಡ್ಡ ನಿರೀಕ್ಷೆಯಲ್ಲಿ ರಾಜ್ಯಗ ಳಿದ್ದು ವಿದ್ಯಾರ್ಥಿಗಳು ಕುತೂಹಲ ದಿಂದ ಕಾಯತಾ ಇದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.