DGP ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ಅಮಾನತು – ಅಚ್ಚರಿಯನ್ನುಂಟು ಮಾಡಿದ ಪೊಲೀಸ್ ಮಹಾನಿರ್ದೇಶಕರ ಅಮಾನತು ಪ್ರಕರಣ…..

Suddi Sante Desk
DGP ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳ ಅಮಾನತು – ಅಚ್ಚರಿಯನ್ನುಂಟು ಮಾಡಿದ ಪೊಲೀಸ್ ಮಹಾನಿರ್ದೇಶಕರ ಅಮಾನತು ಪ್ರಕರಣ…..

ಹೈದರಾಬಾದ್

DGP ಸೇರಿದಂತೆ ಹಲವು ಪೊಲೀಸ್ ಅಧಿಕಾರಿ ಗಳ ಅಮಾನತು – ಅಚ್ಚರಿಯನ್ನುಂಟು ಮಾಡಿದ ಪೊಲೀಸ್ ಮಹಾನಿರ್ದೇಶಕರ ಅಮಾನತು ಪ್ರಕರಣ ಹೌದು ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​ ನಾಯಕರನ್ನು ಭೇಟಿಯಾದ ಹಿನ್ನಲೆಯಲ್ಲಿ ಡಿಜಿಪಿ ಯನ್ನು ಅಮಾನತು ಮಾಡಿ ರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ಅಂಜನಿ ಕುಮಾರ್ ಅವರೇ ಅಮಾನತಾದವರಾಗಿದ್ದು ಚುನಾವಣಾ ಆಯೋಗವು ಅಮಾನತುಗೊಳಿಸಿ ಆದೇಶವನ್ನು ಮಾಡಿದೆ.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಿ ಆದೇಶಿಸಿದೆ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲೇ ಕಾಂಗ್ರೆಸ್​ ರಾಜ್ಯ ಘಟಕದ ಅಧ್ಯಕ್ಷ ರೇವಂತ್​ ರೆಡ್ಡಿ ಅವರನ್ನು ಡಿಜಿಪಿ ಸೇರಿದಂತೆ ಇತರ ಪೊಲೀಸ್​ ಅಧಿಕಾರಿ ಗಳು ಭೇಟಿ ಮಾಡಿದ್ದರು.

ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆ ಯ ಚುನಾವಣಾ ಫಲಿತಾಂಶದಲ್ಲಿ ಆಡಳಿತಾ ರೂಢ ಬಿಆರ್​ಎಸ್​ ವಿರುದ್ಧ ಕಾಂಗ್ರೆಸ್​ ಗೆಲುವು ಸಾಧಿಸಿದೆ.ಕೈ ಪಡೆ 65 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಬಿಆರ್​ಎಸ್​ 35 ಸ್ಥಾನಗಳಿಗೆ ಕುಸಿ ದಿದೆ. ಬಿಜೆಪಿ 9 ಕ್ಷೇತ್ರ ಮತ್ತು ಎಐಎಂಐಎಂ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಚುನಾವಣೆಯ ಫಲಿತಾಂಶ ಪೂರ್ಣವಾಗಿ ಪ್ರಕಟವಾಗುವ ಮೊದಲೇ ಕಾಂಗ್ರೆಸ್​ ಸಿಎಂ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ರೇವಂತ್​ ರೆಡ್ಡಿ ಅವರನ್ನು ಪೊಲೀಸ್​ ಅಧಿಕಾರಿ ಗಳು ಭೇಟಿಯಾಗಿ ಶುಭಾಶಯ ಕೋರಿದ್ದರು.

ಹೈದರಾಬಾದ್​ನಲ್ಲಿ ರೇವಂತ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿರುವ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿ ಗಳು ಹೂಗುಚ್ಛ ನೀಡಿ ಅಭಿನಂದಿಸಿದ್ದರು. ತೆಲಂಗಾಣದ ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಮತ್ತು ನೋಡಲ್ (ವೆಚ್ಚ)ಅಧಿಕಾರಿ ಮಹೇಶ್ ಭಾಗವತ್ ಸಹ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು

ಈ ಒಂದು ವಿಡಿಯೋ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು ಡಿಜಿಪಿ ಯವರನ್ನು ಅಮಾನತು ಮಾಡಿ ಉಳಿದ ಸಿಬ್ಬಂದಿಗಳನ್ನು ಕೂಡಾ ನೊಟೀಸ್ ನೀಡಿದ್ದು ಮುಂದೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಹೈದರಾಬಾದ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.