ತುಮಕೂರು –
ಪ್ರಕರಣವೊಂದರಲ್ಲಿ ಬಂಧಿತರಾಗಿದ್ದ ಆರೋಪಿ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ತುಮಕೂರು ನಗರ ಠಾಣೆಯ ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.ಠಾಣೆಯ ಪಿಎಸ್ಐ ಯಾಗಿದ್ದ ಮಂಜುನಾಥ್ ಹಾಗೂ ಕಾನ್ಸ್‌ಟೇಬಲ್ ರಂಗನಾಥ್ ಅವರನ್ನು ಅಮಾನತುಗೊಳಿಸಲಾಗಿದೆ.

ರಿಯಲ್ ಎಸ್ಟೇಟ್ ಕೇಸ್ ಒಂದರಲ್ಲಿ ಆರೋಪಿಗೆ ಹೈಕೋರ್ಟ್ ನಲ್ಲಿ ಜಾಮೀನು ದೊರೆತಿತ್ತು. ಆದರೆ ಆತನ ಬಿಡುಗಡೆ ಪ್ರಕ್ರಿಯೆ ಗೆ ಇವರು ಲಂಚ ಕೇಳಿದ ಆರೋಪ ಬಂದಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಎಸ್ಪಿ ರಾಹುಲ್ ಕುಮಾರ್ ಅವರಿಗೆ ದೂರು ನೀಡ ಲಾಗಿತ್ತು. ತನಿಖೆ ನಡೆಸಿದ ಅವರು ಮಂಜುನಾಥ್ ಹಾಗೂ ರಂಗನಾಥ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.