ಮುಖ್ಯಶಿಕ್ಷಕ ಅಮಾನತು ದೂರಿನ ಬೆನ್ನಲ್ಲೇ ಅಮಾನತು ಮಾಡಿ ಆದೇಶ…..

Suddi Sante Desk

ಮಂಡ್ಯ –

ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿ ಯೂಟಕ್ಕಾಗಿ ಸರ್ಕಾರದಿಂದ ನೀಡಲಾದ ಉಚಿತ ತೊಗರಿ ಬೇಳೆಯನ್ನು ಮುಖ್ಯ ಶಿಕ್ಷಕನೇ ಮಾರಾಟ ಮಾಡಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಈ ಒಂದು ಆರೋಪ ಕುರಿತು ದೂರಿ ನೀಡಿದ ನಂತರ ಸಧ್ಯ ಮುಖ್ಯಶಿಕ್ಷಕ ನನ್ನು ಅಮಾನತು ಮಾಡಲಾಗಿದೆ

ಹೌದು ಬಿಸಿಯೂಟಕ್ಕೆಂದು ಸರ್ಕಾರದಿಂದ ಬರುವ ತೊಗರಿಬೇಳೆಯನ್ನು ಮಾರಾಟ ಮಾಡಲು ಹೋಗಿ ಇಲ್ಲಿಯ ಶಾಲಾ ಮುಖ್ಯ ಶಿಕ್ಷಕನೊಬ್ಬ ಇದೀಗ ಅಮಾನತು ಶಿಕ್ಷೆಗೊಳಗಾಗಿದ್ದಾನೆ.

ಮಳವಳ್ಳಿ ತಾಲೂಕಿನ ಮಾರಗೌಡನಹಳ್ಳಿ ಪ್ರೌಢಶಾಲೆಯ ಕಾಳರಾಜೇಗೌಡ ಅಮಾನತುಗೊಂಡ ಮುಖ್ಯ ಶಿಕ್ಷಕ ರಾಗಿದ್ದಾರೆ.

ಕಾಳರಾಜೇಗೌಡ ಅವರು ಬಿಸಿಯೂಟದ ತೊಗರಿ ಬೇಳೆ ಯನ್ನು ಮಾರಾಟ ಮಾಡುವ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.ಬಳಿಕ ಕಠಿಣ ಕ್ರಮ ಕೈಗೊಂಡು ಡಿಡಿಪಿಐ ಎಸ್.ಟಿ.ಜವರೇಗೌಡ ಆದೇಶ ಹೊರಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.