ಬೆಂಗಳೂರು –
ಶಿಕ್ಷಕರ ವರ್ಗಾವಣೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿ ದೆ ಹೌದು ಯಾವುದೇ ಇಲಾಖೆಗೆ ಇಲ್ಲದ ವರ್ಗಾ ವಣೆ ನೀತಿ ಶಿಕ್ಷಣ ಇಲಾಖೆಗೆ ಅದರಲ್ಲೂ ಶಿಕ್ಷಕರಿಗೆ ಇದೆ.ಅವೈಜ್ಞಾನಿಕವಾದ ಈ ಒಂದು ವರ್ಗಾವಣೆ ನೀತಿಯ ವಿರುದ್ಧ ಶಿಕ್ಷಕರು ಬೇಸತ್ತಿದ್ದಾರೆ.ಗಂಡ ಒಂದು ಕಡೆ ಹೆಂಡತಿ ಇನ್ನೊಂದು ಕಡೆಗೆ ಮಕ್ಕಳು ಮತ್ತೊಂದು ಕಡೆಗೆ ಪೋಷಕರು ಇನ್ನೊಂದು ಕಡೆ ಊರು ಆ ಕಡೆ ಹೀಗೆ ದಿಕ್ಕಿಗೊಬ್ಬರು ಇದ್ದುಕೊಂಡು ಶಿಕ್ಷಕರು ಕೆಲಸವನ್ನು ಮಾಡತಾ ಇದ್ದಾರೆ.ಈ ನಡುವೆ ವೃತ್ತಿಯಲ್ಲಿ ಒಮ್ಮೆಯಾದರೂ ಕೇಳಿದಲ್ಲಿ ವರ್ಗಾವಣೆ ಸಿಗಲಿ ಸಿಗಲಿ ಎಂದುಕೊಂಡು ಕೇಳಿ ಕೇಳಿ ಬೇಸತ್ತ ಶಿಕ್ಷಕರು ಬೇಸತ್ತಿದ್ದಾರೆ.ಶಿಕ್ಷಕರ ಧ್ವನಿಯಾಗಿರುವ ಶಿಕ್ಷಕರ ಸಂಘಟನೆಯ ನಾಯಕರು ಮೌನವಾಗಿ ಇದ್ದಾರೆ. ಹೀಗಾಗಿ ವರ್ಗಾವಣೆ ಯಿಂದ ಸಿಗದ ಮುಕ್ತಿಯಿಂದಾಗಿ ಬೇಸತ್ತ ಶಿಕ್ಷಕರೊಬ್ಬರು ಆತ್ಮಹತ್ಯೆ ಗೆ ನಿರ್ಧಾರ ಕೈಗೊಂಡಿದ್ದಾರೆ

ಬೆಂಗಳೂರು ಚಲೋ ಕುರಿತ ವರದಿಗೆ ಪ್ರತಿಕ್ರಿಯಿಸಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದಾರೆ.ಈ ಕುರಿತು ಸುದ್ದಿ ಸಂತೆ ಗೆ ಸಂದೇಶ ವನ್ನು ಕಳಿಸಿರುವ ಆ ಶಿಕ್ಷಕ ನನ್ನ ಆತ್ಮಹತ್ಯೆ ಯಿಂದ ಎಲ್ಲಾ ಶಿಕ್ಷಕರಿಗೆ ಒಳ್ಳೆಯದು ಅನುಕೂಲ ಆಗುತ್ತದೆ ಆಗಲಿ ಎಂದಿದ್ದಾರೆ.ಇನ್ನಾದರೂ ನಾಡಿನ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತ ಸ್ವಲ್ಪ ಮಟ್ಟಿಗೆ ಗಮನ ಹರಿಸ ಮಾತುಕತೆ ಮಾಡಿ ಸಮಸ್ಯೆಗೆ ಸ್ಪಂದಿಸಬೇಕು.