ಎರಡು ವರ್ಷಗಳಿಂದ ಶಾಲೆಗೆ ಬಾರದ ಶಿಕ್ಷಕಿ – ವೇತನ ಬಿಡುಗಡೆ ಮಾಡಿ ಪ್ರೀತಿ ತೊರಿದ ಮುಖ್ಯಶಿಕ್ಷಕ

Suddi Sante Desk

ಕಲಬುರಗಿ –

ಎರಡು ವರ್ಷಗಳಿಂದ ಶಾಲೆಗೆ ಬಾರದ ಶಿಕ್ಷಕಿಗೆ ವೇತನ ಬಿಡುಗಡೆ ಮಾಡಿರುವ ಆರೋಪವೊಂದು ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಡ ಶಾಲೆಯ ಮುಖ್ಯ ಶಿಕ್ಷಕನ ವಿರುದ್ದ ಕೇಳಿ ಬಂದಿದೆ.

ಮುಖ್ಯ ಶಿಕ್ಷಕ

ಗ್ರಾಮಸ ಸರ್ಕಾರಿ ಪ್ರೌಢ ಶಾಲೆ ಯಲ್ಲಿ ಶೈಲಾ ಎಂಬುವರು ನೃತ್ಯ ಶಿಕ್ಷಕಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಒಂದು ಶಾಲೆಯಲ್ಲಿ ನೃತ್ಯ ಶಿಕ್ಷಕಿ ಬಂದಿಲ್ಲ ಎನ್ನಲಾಗಿದೆ. ಆದರೂ ಆಗಿದ್ದರು ಕೂಡ ಅವರ ಮೇಲೆ ಪ್ರೀತಿ ತೋರಿಸಿರುವ ಶಿಕ್ಷಕ ವಿಜಯ್ ಆಶ್ರಿತ್ ಸಂಬಳವನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ‌

ನೃತ್ಯ ಶಿಕ್ಷಕಿ ಶೈಲಾ

ಹೀಗಿದ್ದರು ಕೂಡ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ತನಕ ಈ ಕುರಿತು ಆರೋಪ ಹೊತ್ತುಕೊಂಡಿರುವ ಮತ್ತು ಶಾಲೆಗೂ ಬರದಿದ್ದರೂ ಕೈತುಂಬಾ ಸಂಬಳ ತಗೆದುಕೊಂಡಿರುವ ವರನ್ನು ವಿಚಾರಣೆ ಮಾಡಿಲ್ಲ, ಇದರಲ್ಲಿ ಉನ್ನತ ಅಧಿಕಾರಿಗಳು ಕೂಡ ಶಾಮೀಲು ಆಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಗ್ರಾಮಸ್ಥರು.

ನೃತ್ಯ ಶಿಕ್ಷಕಿ ಶೈಲಾ ಅವರು ಶಾಲೆಗೆ ಬಾರದೇ ಹೋದರು ಕೂಡ ಯಾವ ಕಾರಣಕ್ಕೆ ವೇತನ ಪಾವತಿ ಮಾಡುತ್ತಿದ್ದಾರೆ ಅಂತ ಸ್ಥಳೀಯ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.