ಜಂಬಗಿ –
ಶಾಲೆಯಿಂದ ವರ್ಗಾವಣೆಗೊಂಡ ಸಮಯದಲ್ಲಿ ಸೇವೆ ಸಲ್ಲಿಸಿದ ಶಾಲೆಯೊಂದಕ್ಕೆ ಶಿಕ್ಷಕರೊಬ್ಬರು 2 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.ಹೌದು ಬಂದು ಸಾಹೇಬ ಮುಲ್ಲಾ ಅವರೇ ಸರ್ಕಾರಿ ಶಾಲೆಯೊಂದಕ್ಕೆ ದೇಣಿಗೆಯನ್ನು ನೀಡಿದ್ದಾರೆ.ಹೌದು ನಿನ್ನೆ ನಡೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಂಬಗಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶಾಲೆಯ ಅಭಿವೃದ್ಧಿಗಾಗಿ 1,00,000 (ಒಂದು ಲಕ್ಷ)ರೂಪಾಯಿಗಳನ್ನು ಮತ್ತು ಶ್ರೀ ಶಿವಯೋಗೆಶ್ವರ ಕಿರಿಯ ಪ್ರಾಥಮಿಕ ಶಾಲೆಗೆ 1,00,000 (ಒಂದು ಲಕ್ಷ ) ರೂಪಾಯಿಗಳನ್ನು ಕಾಣಿಕೆ ಕೊಟ್ಟಿದ್ದಾರೆ.
ಸಧ್ಯ ಇವರು ಈ ಒಂದು ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆಗೊಂಡಿದ್ದು ಹೀಗಾಗಿ ವಯಕ್ತಿಕವಾಗಿ ಸೇವೆ ಸಲ್ಲಿಸಿದ ಎರಡು ಶಾಲೆಗಳಿಗೆ ಪ್ರತ್ಯೇಕವಾಗಿ 2 ಲಕ್ಷ ರೂಪಾ ಯಿಗಳನ್ನು ದೇಣಿಗೆಯಾಗಿ ನೀಡಿ ಶೈಕ್ಷಣಿಕ ಅಭಿವೃದ್ದಿಗೆ ನೆರವಾಗಿ ಮಾದರಿಯಾಗಿದ್ದಾರೆ. ಇನ್ನೂ ಇವರ ಈ ಒಂದು ಕಾರ್ಯವನ್ನು ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳು ಮತ್ತು ಸಮಸ್ತ ರಾಜ್ಯದ ಶಿಕ್ಷಕರ ಬಳಗದವರು ಸೇರಿದಂತೆ ಹಲವರು ಅಭಿನಂದಿಸಿ ಗೌರವಿಸಿದ್ದಾರೆ.ಅಲ್ಲದೇ ನಿಮ್ಮ ಕಾರ್ಯ ನಮ್ಮೇಲ್ಲರಿಗೂ ಮಾದರಿಯಾಗಿದೆ ಎಂದಿದ್ದಾರೆ.