ಬೆಂಗಳೂರು –
ರಾಜ್ಯದಲ್ಲಿ ಸಧ್ಯ ಮೂರೇ ಮೂರು ವಿಷಯಗಳು ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. ಒಂದು ಕೊರೊನಾ ಎರಡನೇ ಹಂತದ ಚಿತ್ರಣ,ಎರಡನೇಯ ದ್ದು ರಾಜ್ಯ ಸಾರಿಗೆ ನೌಕರರ ಹೋರಾಟ,ಇನ್ನೂ ಇವೆ ರಡಕ್ಕಿಂತ ಪ್ರಮುಖವಾಗಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯೊಂದಿಗೆ ಆಂದೋಲನದ ರೂಪದಲ್ಲಿ ಹೋರಾಟಕ್ಕೆ ಸಿದ್ದವಾಗುತ್ತಿದೆ ಮತ್ತೊಂದು ಸಮಸ್ಯೆ ರಾಜ್ಯದ ಶಿಕ್ಷಕರ ವರ್ಗಾವಣೆ ವಿಚಾರ

ಹೌದು ಕಳೆದ ಹಲವಾರು ವರುಷಗಳಿಂದ ರಾಜ್ಯದಲ್ಲಿ ವರ್ಗಾವಣೆ ವಿಚಾರ ಕುರಿತು ಆವಾಗ ಈವಾಗ ಆಗುತ್ತದೆ ಎಂದುಕೊಂಡು ಸುಮ್ಮನೆ ಕಾದು ಕಾದು ಬೇಸತ್ತ ಶಿಕ್ಷಕರು ಸಿಡಿದೆದ್ದಿದ್ದಾರೆ ಇನ್ನೂ ಸುಮ್ಮನೆ ಕುಳಿತುಕೊಂಡರೆ ಆಗೊದಿಲ್ಲ ಎಂದು ಕೊಂಡು ಒಂದು ದೊಡ್ಡ ಪ್ರಮಾಣದಲ್ಲಿ ಆಂದೋಲ ನವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಮಾಡತಾ ಇದ್ದಾರೆ.

ಕಳೆದ ಒಂದು ವಾರದಿಂದ ವರ್ಗಾವಣೆಯನ್ನು ಗಂಭೀರವಾಗಿ ತಗೆದುಕೊಂಡಿರುವ ಶಿಕ್ಷಕರು ಈಗಾಗಲೇ ರಾಜ್ಯದಲ್ಲಿ ವರ್ಗಾವಣೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಅವರಿಗೆ ಪತ್ರಗಳನ್ನು ಇ ಮೇಲ್ ಮೂಲಕ ಕಳಿಸಿದ್ದಾರೆ

ವರ್ಗಾವಣೆ ತಕ್ಷಣ ಪ್ರಾರಂಭಿಸ ಬೇಕು ಹಾಗೂ ವರ್ಗಾವಣೆಯಲ್ಲಿ ಇರುವ ಅವೈಜ್ಞಾನಿಕ ನಿಯಮ ದಿಂದ ಮುಕ್ತಿ ಪಡೆದು ನಮ್ಮ ತವರು ಜಿಲ್ಲೆಗೆ ವರ್ಗಾವಣೆ ಹೊಂದಲು ಸೇರಿರುವ ಸಮಾನ ಮನಸ್ಕ ಶಿಕ್ಷಕರು ಕಳೆದ ಮೂರು ದಿನಗಳಿಂದ ಪ್ರತಿದಿನ ಗೂಗಲ್ ಮಿಟ್ ಮಾಡಿ ಪ್ರತಿದಿನ ವಿಶೇಷವಾಗಿ ಮುಖ್ಯಮಂತ್ರಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಮೇಲ್, ಸಾಮಾಜಿಕ ಜಾಲತಾಣಗಳ ಮೂಲಕ ವರ್ಗಾವಣೆ ಪ್ರಾರಂಭಿಸು ವಂತೆ ನಾಡಿನ ಸಮಸ್ತ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ.

ಇನ್ನೂ ಪ್ರತಿದಿನ ಗೂಗಲ್ ಮಿಟ್ ನಲ್ಲಿ ನಡೆಯುವ ಗೂಗಲ್ ಮಿಟ್ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸಹಕಾರ ನೀಡಬೇಕೆಂದು ಶಿಕ್ಷಕ ಸಮುದಾಯ ಕೇಳಿಕೊಂಡಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಸಮಾನ ಮನಸ್ಕ ಶಿಕ್ಷಕರು ಬಿಡಲಾರದೇ ವರ್ಗಾವಣೆ ಕುರಿತು ಬಿಸಿ ಬಿಸಿ ಚರ್ಚೆ ಮಾಡತಾ ಇದ್ದಾರೆ.ಈಗಾಗಲೇ ಪ್ರಧಾನಿ ಅವರಿಗೆ ಸಂದೇಶ ಕಳಿಸಿದ್ದು ನಂತರ ಬೇರೆ ಏನು ಮಾಡಬೇಕು ಎಂಬ ಕುರಿತು ಚರ್ಚೆ ಯನ್ನು ಮಾಡತಾ ಇದ್ದಾರೆ ಆದರೆ ಈವರೆಗೆ ನಮ್ಮ ಶಿಕ್ಷಕರಿಗೆ ಪೈನಲ್ ನಿರ್ಧಾರ ಮಾತ್ರ ಯಾರು ಹೇಳಿಲ್ಲ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು
