ಬೆಂಗಳೂರು –
ಈವರೆಗೆ ನ್ಯಾಯಸಮ್ಮತ ವರ್ಗಾವಣೆಗಾಗಿ ಕಾದು ಕಾದು ಬೇಸತ್ತ ನಾಡಿನ ಶಿಕ್ಷಕರು ಈಗ ಬೀದಿಗಿಳಿದು ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.ಹೌದು ವರ್ಗಾವಣೆ ಯಲ್ಲಿ ಯಾವುದೇ ಶಿಕ್ಷಕರಿಗೆ ಅನ್ಯಾಯ ಮಾಡೊದಿಲ್ಲ ಎನ್ನುತ್ತಲೆ ರಾಜೀನಾಮೆ ನೀಡಿದರು ಶಿಕ್ಷಣ ಸಚಿವರು.ಇತ್ತ ಅವೈಜ್ಞಾನಿಕ ರೀತಿಯ ಈ ಒಂದು ವರ್ಗಾವಣೆಯ ನೀತಿಯ ವಿರುದ್ಧ ನಾಡಿನ ಶಿಕ್ಷಕರು ಸಿಡಿದೆದ್ದಿದ್ದು ಕಳೆದ ಹಲವು ದಿನಗಳಿಂದ ತೆರೆ ಮರೆಯಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದ್ದ ಬೆಂಗಳೂರು ಚಲೋ ಗೆ ಈಗ ಅಂತಿಮವಾಗಿ ವೇದಿಕೆ ಸಿದ್ದ ಮಾಡಿದ್ದಾರೆ
ಹೌದು ಈವರೆಗೆ ಕಾದು ಕಾದು ಬೇಸತ್ತ ನಮಗೆ ಅಂತಿಮವಾಗಿ ಈಗ ಬೆಂಗಳೂರು ಚಲೋ ಮಾಡಲು ನಿರ್ಧಾರವನ್ನು ಮಾಡಲಾಗಿದೆ ಶೀಘ್ರದಲ್ಲೇ ದಿನಾಂಕ ವನ್ನು ಹೇಳಲಾಗುತ್ತದೆ ವರ್ಗಾವಣೆ ಅಪೇಕ್ಷಿತ ಶಿಕ್ಷಕರು ಸಿದ್ದರಾಗಿರಿ ಎಂದು ವೇದಿಕೆ ಕರೆ ನೀಡಿದ್ದು ಬೆಂಗಳೂರು ಚಲೋ ಆರಂಭ ಮಾಡುವ ಮುನ್ನವೇ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೂಡಲೇ ಎಚ್ಚೆತ್ತುಕೊಂಡ ಶಿಕ್ಷಕರ ವರ್ಗಾವಣೆ ಗೆ ಸ್ಪಂದಿಸೊದು ಅವಶ್ಯಕವಿದೆ ಇಲ್ಲವಾದರೆ ಶಿಕ್ಷಕರು ಸಿಡಿದೆಳಲಿದ್ದಾರೆ.