ಬೆಂಗಳೂರು –
ರಾಜ್ಯದ ಅನುದಾನರಹಿತ ಖಾಸಗಿ ಶಾಲೆ ಸಂಘಟ ನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ರಾಜ್ಯ ದ ಶಿಕ್ಷಕರ ಮತ್ತು ಶಿಕ್ಷಕರ ಸಂಘಟನೆಗಳ ಕುರಿತಂತೆ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಒಂದು ಆಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಗ್ಗೆ ಮತ್ತು ಇಲಾಖೆಯ ಅಧಿಕಾರಿಗಳ ಅತ್ಯಂತ ಬಗ್ಗೆ ಹಗುರವಾಗಿ ಮ್ತುತ ಕೀಳಾಗಿ ಮತ್ತು ಅವಹೇಳಕಾರಿಯಾಗಿ ಮಾತನಾಡಿರುವುದನ್ನು ನಾಡಿನ ಶಿಕ್ಷಕರು ಮತ್ತು ಶಿಕ್ಷಕರ ಸಂಘದವರು ಉಗ್ರವಾಗಿ ಖಂಡಿಸಿದ್ದಾರೆ.
ಇದು ಅವರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ ಎಂದು ನಾಡಿನ ಶಿಕ್ಷಕರು ಹೇಳಿದ್ದಾರೆ. ಈ ಕುರಿತಂತೆ ಸುದ್ದಿ ಸಂತೆಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ದೂರವಾಗಿ ಕರೆ ಮಾಡಿ ಶಿಕ್ಷಕರ ಬಗ್ಗೆ ಸಂಘಟನೆಯ ಕುರಿತಂತೆ ಹಾಗೇ ಅಧಿಕಾರಿಗಳ ಕುರಿತು ಹಗುರವಾಗಿ ಮಾತನಾಡಿದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ರು.ರಾಜ್ಯದಲ್ಲಿ ಶಿಕ್ಷಕರ ಸಂಘಟನೆಗಳು ಸುದೀರ್ಘ ಇತಿಹಾಸವನ್ನು ಹೊಂದಿದ್ದು ರಾಜ್ಯದಲ್ಲಿ ಶಿಕ್ಷಣದ ಸಾರ್ವತ್ರೀಕರಣಕ್ಕೆ ಹಗಲು ರಾತ್ರಿ ಶ್ರಮಿಸುತ್ತಿದೆ. ನಮ್ಮ ಸಂಘ ಮತ್ತು ನಮ್ಮ ನಿಸ್ವಾರ್ಥ ಸೇವೆಯ ಬಗ್ಗೆ ಡಿ . ಶಶಿಕುಮಾರ್ ರವರಿಂದ ಪ್ರಶಂಶೆ ಪತ್ರದ ಅವಶ್ಯಕತೆಯಿಲ್ಲ ಎಂದಿದ್ದಾರೆ
ಸಂಘವು ರಾಜ್ಯದಲ್ಲಿ ಪ್ರತಿಬಾರಿ ನೈಸರ್ಗಿಕ, ಸಾಂಕ್ರಾ ಮಿಕ ಅಥವಾ ಬೇರೆ ಯಾವುದೇ ಬಗೆಯ ವಿಕೋಪ ಗಳು ಬಂದೊದಗಿದ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆ ಹಾಗೂ ಕಾಳಜಿಯಿಂದ ಮತ್ತು ಅಷ್ಟೇ ಪ್ರಾಮಾಣಿಕತೆಯಿಂದ ಉದಾರವಾಗಿ ಶಿಕ್ಷಕರ ವೇತನವನ್ನು ಈ ನಾಡಿಗೆ ನೀಡಿ ತನ್ನ ಔದಾರ್ಯ ವನ್ನು ಮೆರೆದಿದೆ.ಹಾಗೇಯೆ ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕೂಡಾ ಸಂಘವು ಮಾನವೀಯ ನೆಲೆಗಟ್ಟಿನಲ್ಲಿ ಸದಾ ಚಿಂತನೆ ಮಾಡುತ್ತಿದೆ,ಖಾಸಗಿ ಶಾಲಾ ಶಿಕ್ಷಕ ರಂತೆಯೇ ರಾಜ್ಯದಲ್ಲಿ ನೊಂದ ಜನತೆಯ ಜೊತೆ ಸಂಘವು ಇದೆ ಎಂಬುದು ನಾಡಿಗೆ ಗೊತ್ತಿದೆ.
ಸಂಘಟನೆಯ ಆಂತರಿಕ ಚರ್ಚೆಯಾಗಿ ನಮ್ಮ ನಿರ್ಣಯ ಸರಕಾರಕ್ಕೆ ಸಲ್ಲಿಕೆಯಾಗುವ ಮೊದಲು ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಚರ್ಚೆಯ ಒಂದು ಅಂಶವನ್ನು ಗಮನಿಸಿ ಇಲ್ಲ ಸಲ್ಲದ ಹೇಳಿಕೆ ಕೊಡುವುದು ಜವಬ್ದಾರಿಯುತ ವ್ಯಕ್ತಿಗಳಿಗೆ ಶೋಭೆ ತರುವಂತದ್ದಲ್ಲ ಎಂದು ರಾಜ್ಯದ ಶಿಕ್ಷಕರು ಮತ್ತು ಶಿಕ್ಷಕ ಸಂಘಟನೆಗಳ ಮುಖಂಡರು ಹೇಳಿ ಶಶಿ ಕುಮಾರ್ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿ ದ್ದಾರೆ.ಪೋಷಕರ ರಕ್ತ ಹೀರಿ ಲಾಭಗಳಿಸಲು ಶಿಕ್ಷಣ ದ ವ್ಯಾಪಾರಿ ಸಂಸ್ಥೆಗಳನ್ನು ತೆರೆದಿರುವ ಡಿ . ಶಶಿಕು ಮಾರ್ ರವರಿಂದ ನಾವು ನೈತಿಕತೆ ಪ್ರಾಮಾಣಿಕತೆ ಪಾಠ ಕಲಿಯುವ ಅವಶ್ಯಕತೆ ಇಲ್ಲ.ಕೋವಿಡ್ ಪೂರ್ವದಲ್ಲಿ ಪಾಲಕರಿಂದ ಕೋಟ್ಯಾಂತರ ಸುಲಿಯುತ್ತಿದ್ದ ಇವರು ತಮ್ಮ ಶಿಕ್ಷಕರಿಗೆ ಶಿಕ್ಷಣ ಹಕ್ಕು ಕಾಯಿದೆ ಪ್ರಕರಣ 23 ರ ಅನ್ವಯ ಎಷ್ಟು ಸಂಬಳ ಕೊಟ್ಟರುತ್ತಾರೆ ಎಂದು ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ತಿಳಿದಿದೆ,ಅಮಾಯಕ ಶಿಕ್ಷಕರನ್ನು ಮುಂದಿಟ್ಟುಕೊಂಡು ನಾಟಕ ಮಾಡು ತ್ತಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸರಕಾರಿ ಶಾಲೆಗಳನ್ನು ಸಬಲೀಕ ರಣಗೊಳಿಸುವ ಮೂಲಕ ಅತ್ಯಂತ ಕೆಳಸ್ತರದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮೂಲಕ ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಲು ಅವಿರತ ವಾಗಿ ಶ್ರಮಿಸುತ್ತಿದೆ.ಸೇವೆಯಾಗಬೇಕಿದ್ದ ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿಸಿ ಮಕ್ಕಳನ್ನು ಮತ್ತು ಪಾಲ ಕರನ್ನು ಮತ್ತು ಶಿಕ್ಷಕರನ್ನು ವ್ಯವಸ್ಥಿತವಾಗಿ ವಂಚಿಸಿ ಲೂಟಿ ಮಾಡುತ್ತಿರುವ ಶಶಿಕುಮಾರ್ ನಂತಹವರು ಹಗಲು ದರೋಡೆ ನಡೆಸುವ ಬಣ್ಣ ಬಯಲಾಗಿದ್ದು ಡಿ . ಶಶಿಕುಮಾರ್ ರವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆಯಿದೆ . ನಮ್ಮ ಶಿಕ್ಷಕ ಸಂಘದ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳ ಬಗ್ಗೆ ಅತ್ಯಂತ ಹಗುರವಾಗಿ , ಮಾತನಾಡಿರುವುದು ಖಂಡನೀಯ ಎಂದು ನಾಡಿನ ಶಿಕ್ಷಕರು ಹಾಗೇ ಗ್ರಾಮೀಣ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ ಇವರು ಹೇಳಿದ್ದು ಕೂಡಲೇ ಇವರ ಮೇಲೆ ಸೂಕ್ತವಾದ ಕ್ರಮವನ್ನ ಕೈಗೊಳ್ಳುವಂತೆ ಒತ್ತಾಯವನ್ನು ಮಾಡಿದ್ದಾರೆ.