ಚಿತ್ರದುರ್ಗ –
ವಿಕಲಚೇತನ ಶಿಕ್ಷಕರು ಮನೆಯಿಂದಲೇ ಕೆಲಸ ಮಾಡುವ ಕುರಿತು ಈ ಹಿಂದೆ ಮಾಡಲಾಗಿದ್ದ ಆದೇಶವೇ ಮುಂದುವರೆಯಲಿದೆ ಯಾವ ವಿಕಲಚೇತನ ನೌಕರರ ಗೊಂದಲಕ್ಕೆ ಒಳಗಾಗ ಬಾರದು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.ಈ ವಿಷಯದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರೋನಾ ಮಾಹಾಮಾರಿಯ ಹಿನ್ನೆಲೆಯಲ್ಲಿ ಸರಕಾರ ಮುಖ್ಯಕಾರ್ಯದರ್ಶಿಗಳಾದ ರವಿಕುಮಾರ ಅವರು ವಿಕಲಚೇತನ ನೌಕರರ ಸಮಸ್ಯೆಗಳನ್ನು ಅರಿತು ವಿಕಲಚೇತನ ನೌಕರರು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ಮಾಡಿದ್ದರೂ ಅದರ ಜೊತೆಗೆ ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಸಂಘದ ವತಿಯಿಂದ ಮನವಿ ಪತ್ರವನ್ನು ನೀಡಿ ಶಿಕ್ಷಕರು ಕೂಡಾ ಮನೆಯಿಂದಲೇ ಕೆಲಸ ಮಾಡುವ ಬಗ್ಗೆ ಈಗಾಗಲೇ ಆದೇಶ ಮಾಡಿಸ ಲಾಗಿದೆ.ಅಲ್ಲದೇ ಪ್ರಸ್ತುತ ೨೦ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.೧೧ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆದಿದೆ.ಪ್ರಸ್ತುತವಾಗಿ ಅನ್ ಲಾಕ್ ಇರುವ ಜಿಲ್ಲೆಯಲ್ಲಿ ಕೂಡಾ ಸಂಚರಿಸಲು ಬಸ್ ಗಳು ಇಲ್ಲದ ಕಾರಣ ವಿಕಲಚೇತನ ಶಿಕ್ಷಕರು ಶಾಲೆಗಳಿಗೆ ತೆರಳಲು ತೊಂದರೆಯಾಗುತ್ತದೆ.ಅಲ್ಲದೇ ಮನೆಯಿಂದಲೇ ಕೆಲಸ ನಿರ್ವಹಿಸುವ ಬಗ್ಗೆಮಾಡಿದ ಆದೇಶದಲ್ಲಿ ಮುಂದಿನ ಆದೇಶ ಬರುವವರೆಗೂ ಅಂತ್ತಾ ಇದೆ.ಆದ್ದರಿಂದ ರಾಜ್ಯ ಎಲ್ಲಾ ವಿಕಲಚೇತನ ಶಿಕ್ಷಕರು ಬಸ್ ಸಂಚಾರ ಪ್ರಾರಂಭ ಮಾಡುವ ತನಕ ಮನೆಯಿಂದಲೇ ಕೆಲಸ ಮಾಡಲು ಅವಕಾಶವಿದ್ದು, ಯಾವ ವಿಕಲಚೇತನ ಶಿಕ್ಷಕರು ಗೊಂದಲಕ್ಕೆ ಒಳಗಾರಬಾರದು ಎಂದು ಮನವಿ ಮಾಡಿದ್ದಾರೆ